ಬ್ರಹ್ಮಾವರ: ಏಪ್ರಿಲ್ ೬(ಹಾಯ್ ಉಡುಪಿ ನ್ಯೂಸ್) ಹೊಸೂರು ಗ್ರಾಮದ ಮಹಿಳೆಯೋರ್ವರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ರೇವತಿ (೨೮) ಎಂಬವರು ಕೆಳಕಂಪ,ಕರ್ಜೆ, ಹೊಸೂರು ಗ್ರಾಮದ ನಿವಾಸಿಯಾಗಿದ್ದು ತನ್ನ ಗಂಡ ಟಿ.ಬಿ.ಕಾಯಿಲೆಯಿಂದ ಮ್ರತಪಟ್ಟ ನಂತರ ಮಾನಸಿಕವಾಗಿ ಅಸ್ವಸ್ಥ ರಾಗಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಂಪೂರ್ಣ ಗುಣಮುಖ ರಾಗಿರುವುದಿಲ್ಲ.ದಿನಾಂಕ ೨೮-೩-೨೦೨೨ ರಂದು ರಾತ್ರಿಯಿಂದ ರೇವತಿಯವರು ಮನೆಯಲ್ಲಿ ಮಲಗಿದ್ದವರು ರಾತ್ರಿಯ ಅವಧಿ ಯಲ್ಲಿ ಮನೆ ಬಿಟ್ಟು ಹೋಗಿರುತ್ತಾರೆ . ಎಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ಶ್ರೀಮತಿ ಸಹನಾ ಬಾಯಿ ಎಂಬವರು ನೀಡಿರುವ ದೂರಿನ ಮೇರೆಗೆ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.