Spread the love

ಬೈಂದೂರು: ಏಪ್ರಿಲ್ ೩ (ಹಾಯ್ ಉಡುಪಿ ನ್ಯೂಸ್) ಯಡ್ತರೆ ಶಾಲೆಗೆ ನುಗ್ಗಿದ ಕಳ್ಳರು ನಗದಿನೊಂದಿಗೆ ಪರಾರಿಯಾದ ಘಟನೆ ನಡೆದಿದೆ.

ಆನಂದ ಎಮ್ ರವರು ರತ್ತು ಬಾಯಿ ಜನತಾ ಪ್ರೌಢಶಾಲೆ, ಯಡ್ತರೆ, ಬೈಂದೂರು ತಾಲೂಕು ಇದರ ಮುಖ್ಯೋಪಾಧ್ಯಾಯರಾಗಿದ್ದು ದಿನಾಂಕ ೧-೦೪-೨೦೨೨ ರಂದು ಶಾಲೆಯ ಕರ್ತವ್ಯಗಳು ಮುಗಿದ ನಂತರ ೫ ಘಂಟೆಗೆ ಕೊಠಡಿಗಳಿಗೆ ಬೀಗ ಹಾಕಿ ಮನೆಗೆ ಹೋಗಿದ್ದು , ದಿನಾಂಕ ೨-೦೪-೨೦೨೨ ರಂದು ಬೆಳಿಗ್ಗೆ ೯-೨೦ ಘಂಟೆಗೆ ಶಾಲೆಗೆ ಬಂದು ಅಧ್ಯಾಪಕರ ಕೊಠಡಿಯ ಬೀಗವನ್ನು ತೆಗೆದು ನೋಡಿದಾಗ ಪಕ್ಕದಲ್ಲಿರುವ ಶಾಲಾ ಕಚೇರಿಯ ಬೀಗ ಮುರಿದಿರುವುದು

ಕಂಡು ಬಂದಿದ್ದು ಯಾರೋ ಕಳ್ಳರು ರಾತ್ರಿ ಶಾಲಾ ಕಚೇರಿಯ ಬೀಗ ಮುರಿದು ಕಪಾಟುಗಳ ಬೀಗವನ್ನು ತೆರೆದು ಶಾಲಾ ದಾಖಲೆ ಗಳನ್ನು ಮತ್ತು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ; ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿರುವ ಸಿ.ಸಿ ಕೆಮರಾದ ಡಿ.ವಿ.ಆರ್ ಅನ್ನು ಹಾಳುಮಾಡಿದ್ದು ಕಪಾಟಿನಲ್ಲಿ ದ್ದ ೩೫೦೦೦ ರೂಪಾಯಿ ನಗದನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!