Spread the love

ಕುಂದಾಪುರ: ಏಪ್ರಿಲ್ ೩(ಹಾಯ್ ಉಡುಪಿ ನ್ಯೂಸ್) ಇಲ್ಲಿನ ನಿವಾಸಿ ಪ್ರದೀಪ್ ಶೆಟ್ಟಿ ಎಂಬವರ ಮನೆಯಿಂದ ೨ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಕಳವಾದ ಘಟನೆ ನಡೆದಿದೆ.

ಕುಂದಾಪುರದ ಪ್ರದೀಪ್ ಶೆಟ್ಟಿಯವರ ಪತ್ನಿ ಕಳೆದ ವರ್ಷ ಮಂದಾರ್ತಿಯಲ್ಲಿ ನಡೆದ ತನ್ನ ಸಂಬಂಧಿಕರ ಮದುವೆಗೆ ಹೋಗಿ ವಾಪಸ್ ಬಂದು ತನ್ನ ಚಿನ್ನದ ಕಂಠಿ ಸರವನ್ನು ಮನೆಯ ಒಳ ಕೋಣೆಯಲ್ಲಿರುವ ಕಪಾಟಿನ ಲಾಕರ್ ನಲ್ಲಿ ಇರಿಸಿರುತ್ತಾರೆ. ನಿನ್ನೆ ದಿನಾಂಕ ೨-೪-೨೦೨೨ ರಂದು ಯುಗಾದಿಯ ಹಬ್ಬದ ದಿನ ದಂದು ಚಿನ್ನದ ಸರ ಹಾಕಿ ಕೊಳ್ಳಲು ಕಪಾಟಿನ ಬೀಗ ತೆಗೆದು ನೋಡುವಾಗ ಚಿನ್ನದ ಕಂಠಿ ಸರ ಲಾಕರ್ ನಲ್ಲಿ ಇಟ್ಟಸ್ಥಳದಲ್ಲಿ ಇಲ್ಲವಾಗಿದೆ. ಮನೆ ಎಲ್ಲಾ ಹುಡುಕಾಡಿದರೂ ಚಿನ್ನದ ಸರ ಪತ್ತೆ ಯಾಗಿರುವುದಿಲ್ಲ. ಸಂಬಂಧಿಕರ ಮದುವೆ ಸಂದರ್ಭದಲ್ಲಿ ದೂರದ ಸಂಬಂಧಿಕ ರಾಘವೇಂದ್ರ ಎಂಬಾತನು ಆಗಾಗ ಮನೆಗೆ ಬರುತ್ತಿದ್ದನು. ಸುಮಾರು ೫೦ ಗ್ರಾಂ ತೂಕದ ೨ ಲಕ್ಷ ಮೌಲ್ಯದ ಸರವನ್ನು ಕಪಾಟಿನ ಲಾಕರ್ ನ ಕೀ ಬಳಸಿ ರಾಘವೇಂದ್ರ ನೇ ಕಳವು ಮಾಡಿರುವ ಬಗ್ಗೆ ಸಂಶಯ ಇರುತ್ತದೆ ಎಂದು ಪ್ರದೀಪ್ ಶೆಟ್ಟಿಯವರು ನೀಡಿರುವ ದೂರಿನ ಮೇರೆಗೆ ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!