ಉಡುಪಿ : ಏಪ್ರಿಲ್ ೨(ಹಾಯ್ ಉಡುಪಿ ನ್ಯೂಸ್)
ಉಡುಪಿ ಜಿಲ್ಲೆಯು 25 ಆಗಸ್ಟ್ 1997 ರಲ್ಲಿ ಅಸ್ತಿತ್ವಕ್ಕೆ ಬಂದು, ಸರಿ ಸುಮಾರು ಇಪ್ಪತೈದು ವರುಷಗಳು ಕಳೆದರೂ, ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಇಂಜಿನೀಯರಿಂಗ್ ಕಾಲೇಜು ಇಲ್ಲದೇ ಬಡ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ವಿಷಯವನ್ನು ಮನಗೊಂಡು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಇವರು ಅಗತ್ಯವಾಗಿ ಸರಕಾರಿ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ, ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಎಸ್.ರಿಗೆ, ಕೃಷಿ ಮತ್ತು ರೈತರ ಕಲ್ಯಾಣ ಕೇಂದ್ರ ಸಚಿವರು ಶೋಭಾ ಕರಂದ್ಲಾಜೆ ರವರಿಗೆ, ಜಿಲ್ಲಾಧಿಕಾರಿಯವರ ಪರವಾಗಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಬಿ. ಎನ್. ರವರಿಗೆ,
ಕರ್ನಾಟಕ ರಕ್ಷಣಾ ವೇದಿಕೆ (ಟಿ. ಎ. ನಾರಾಯಣ ಗೌಡ್ರ ಬಣ) ಉಡುಪಿ ಜಿಲ್ಲಾ ಘಟಕ ಮತ್ತು 7 ತಾಲೂಕಿನ ಕ. ರ. ವೇ. ಘಟಕದ ವತಿಯಿಂದ ಮನವಿಯನ್ನು ನೀಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಜಿಲ್ಲಾದ್ಯಕ್ಷರಾದ ಸುಜಯ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ಪ್ರೇಮಲತಾ. ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಫ್ರ್ಯಾಂಕಿ ಡಿ’ಸೋಜ ಕೊಳಲಗಿರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ದೇವರಾಜ್ ಎಮ್. ಜಿಲ್ಲಾ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಮುಕ್ತಪ್ರಿಯ, ಜಿಲ್ಲಾ ಸಂಚಾಲಕ ನಾರಾಯಣ ಜತ್ತನ್, ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಶ್ರೀಮತಿ ಗೀತಾ, ಜಿಲ್ಲಾ ಮಹಿಳಾ ಘಟಕದ ಸಲಹೆಗಾರ್ತಿ ಸುನಂದ, ಉಡುಪಿ ತಾಲೂಕು ಅಧ್ಯಕ್ಷೆ ತಭಸುಮ್, ಜಿಲ್ಲಾ ಸಾಂಸ್ಕ್ರತಿಕ ಕಾರ್ಯದರ್ಶಿ ಮಮತಾ, ಜಿಲ್ಲಾ ಘಟಕದ ಸದಸ್ಯರುಗಳಾದ ಆ. ರಾ. ಪ್ರಭಾಕರ ಪೂಜಾರಿ, ಮೋಹನ್ ಕಲ್ಮಾಡಿ, ರಿತೇಶ್ ಕಲ್ಯಾಣಪುರ, ರಾಜಾ ಹುಸೇನ್, ನಿರ್ಮಲ ಮೆಂಡನ್, ಇವರುಗಳ ಉಪಸ್ಥಿತಿಯಲ್ಲಿ ಮನವಿ ನೀಡಲಾಯಿತು…