Spread the love

ಬೆಳ್ಮಣ್: ಏಪ್ರಿಲ್ ೨ (ಹಾಯ್ ಉಡುಪಿ ನ್ಯೂಸ್) ಕಾಲೇಜು ಪ್ರಾಂಶುಪಾಲರೋರ್ವರಿಗೆ ಅಪರಿಚಿತರು ಸುಳ್ಳು ಕರೆ ಮಾಡಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ವಿಫಲ ಯತ್ನವನ್ನು ನಡೆಸಿರುವ ಬಗ್ಗೆ ದೂರು ನೀಡಲಾಗಿದೆ.

ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾದ ವಿಷ್ಣುಮೂರ್ತಿ ಮಯ್ಯ (೫೯)ರವರು ದಿನಾಂಕ ೩೦-೩-೨೦೨೨ ರಂದು ಬೆಳಿಗ್ಗೆ ೧೧.೫೨ ರ ಸಮಯಕ್ಕೆ ಕಾಲೇಜಿನ ತಮ್ಮ ಕೊಠಡಿಯಲ್ಲಿ ಕಛೇರಿಯ ಸಿಬ್ಬಂದಿಗಳಾದ ವಸಂತ, ಕುಮಾರಿ ಶಾಲಿನಿ ಇವರೊಂದಿಗೆ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಅವರ ಮೊಬೈಲ್ ಗೆ ಯಾರೋ ಹೆಂಗಸು ಕರೆ ಮಾಡಿ ತಾನು ಪಿ.ಯು.ಮಂಡಳಿಯ ಪರೀಕ್ಷಾ ವಿಭಾಗದ ಅಧಿಕಾರಿ ಕರೆ ಮಾಡುತ್ತಿದ್ದು ದಿನಾಂಕ ೩೧-೩-೨೦೨೨ ರಂದು ನಡೆಯುವ ಬಯೋಲಜಿ ಪ್ರಶ್ನೆ ಪತ್ರಿಕೆ ಬಯಲಾಗಿದೆ.ಉಳಿದ ಇಂಗ್ಲೀಷ್, ವಿಜ್ಞಾನ ವಿಭಾಗದ ಪ್ರಶ್ನೆ ಪತ್ರಿಕೆ ಕೂಡಾ ಬಯಲಾಗಿದೆ. ನಿಮ್ಮಲ್ಲಿ ಇರಿಸಲಾದ ಪ್ರಶ್ನೆ ಪತ್ರಿಕೆ ಗಳನ್ನು ಕ್ರಾಸ್ ಚಕ್ ಮಾಡಬೇಕಾಗಿದೆ.ನಿಮ್ಮಲ್ಲಿರುವ ಪ್ರಶ್ನೆ ಪತ್ರಿಕೆಗಳನ್ನು ಈ ವಾಟ್ಸ್ ಯಾಪ್ ನಂಬರ್ ಗೆ ಕಳುಹಿಸಿ ಎಂದು ಹೇಳಿದ್ದು, ಪ್ರಾಂಶುಪಾಲ ವಿಷ್ಣುಮೂರ್ತಿ ಮಯ್ಯರು ಕರೆ ಮಾಡಿದ ವ್ಯಕ್ತಿಯ ಹೆಸರು ವಿಚಾರಿಸಿದಾಗ ತನ್ನ ಹೆಸರು ಹೇಳದೆ ಕರೆ ಮಾಡಿದ ವ್ಯಕ್ತಿ ಫೋನ್ ಕಟ್ ಮಾಡಿದ್ದು ಯಾರೋ ಮಹಿಳೆ ಯು ಮಂಡಳಿಯಿಂದ ಕರೆ ಮಾಡುತ್ತಿರುವುದಾಗಿ ಸುಳ್ಳು ಹೇಳಿ ವಿಷ್ಣುಮೂರ್ತಿ ಮಯ್ಯರಿಗೆ ಹುಸಿ ಕರೆ ಮಾಡಿ ಪ್ರಶ್ನೆ ಪತ್ರಿಕೆ ಕದ್ದು ಸೋರಿಕೆ ಮಾಡಲು ಪ್ರಯತ್ನಿಸಿರುವುದಾಗಿ ಪ್ರಾಂಶುಪಾಲರು ನೀಡಿರುವ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಪೋಲಿಸ್ ಇಲಾಖೆ ಶೀಘ್ರ ದಲ್ಲಿ ಅಪರಾಧಿಗಳನ್ನು ಬಂಧಿಸಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿದ್ದಾರೆ.

error: No Copying!