ಕಾಪು: ಏಪ್ರಿಲ್ 1(ಹಾಯ್ ಉಡುಪಿ ನ್ಯೂಸ್) ಕಾಪು ನಿವಾಸಿ ಜ್ಯೋತಿ ಎಂಬವರಿಗೆ ನೆರೆಮನೆಯ ಮಧ್ವ ಭಟ್ ಎಂಬವರು ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಕಾಪು ನಿವಾಸಿ ಜ್ಯೋತಿ ಅವರಿಗೂ ನೆರೆಮನೆಯ ನಿವಾಸಿ ಮಧ್ವ ಭಟ್ ಎಂಬವರಿಗೂ ಕೆಲವು ವರ್ಷಗಳಿಂದ ವೈಮನಸ್ಸಿದೆ ಎನ್ನಲಾಗಿದೆ. ದಿನಾಂಕ 29-03-2022ರಂದು ಸಂಜೆ 6 ಘಂಟೆಯ ಸಮಯಕ್ಕೆ ಮಧ್ವ ಭಟ್ ರವರು ಜ್ಯೋತಿಯವರ ಮನೆಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಜ್ಯೋತಿಯವರ ಮೈಗೆ ಕೈ ಹಾಕಿ ಹಿಡಿದು ದೂಡಿದ್ದು ಜ್ಯೋತಿಯವರು ಕೆಳಗೆ ಬಿದ್ದಾಗ ಅಲ್ಲಿಯೇ ಇದ್ದ ಕೋಲಿನಿಂದ ಮಧ್ವ ಭಟ್ ಜ್ಯೋತಿಯವರ ಎಡ ಕೈ ಗೆ ಹೊಡೆದಿದ್ದು ಹೊಡೆತಕ್ಕೆ ಕ್ಯೆಯಲ್ಲಿ ಗಾಯವಾಗಿದ್ದು ಜ್ಯೋತಿ ಯವರು ಗಾಯಗೊಂಡು ಬೊಬ್ಬೆ ಹಾಕತೊಡಗಿದಾಗ ಮಧ್ವ ಭಟ್ ಇವತ್ತು ನಿನ್ನನ್ನು ಬಿಟ್ಟಿದ್ದೇನೆ , ಮುಂದಕ್ಕೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ ಹೋಗಿರುತ್ತಾನೆ ಎಂದು ಜ್ಯೋತಿ ಯವರು ನೀಡಿದ ದೂರಿನ ಮೇರೆಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.