IMG_20250918_004914.jpg
Spread the love

ದಿನಾಂಕ:18-09-2025(ಹಾಯ್ ಉಡುಪಿ ನ್ಯೂಸ್)

ಬೆಳ್ತಂಗಡಿ: ನೇತ್ರಾವತಿ ನದಿ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ವಿಶೇಷ ತನಿಖಾ ದಳ ಎಸ್ಐಟಿ ಶೋಧ ಕಾರ್ಯ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಅಸ್ತಿಪಂಜರಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.


ಪ್ರಕರಣದ ಸಾಕ್ಷಿ ಚಿನ್ನಯ್ಯ  ಈ ಹಿಂದೆ ಗುರುತಿಸಿದ್ದ 11ನೇ ಸ್ಥಳದ ಸಮೀಪದಲ್ಲೇ ಈ ಮೂಳೆಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ. ಈ ಹಿಂದೆ ಇದೇ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಅನೇಕ ಮೃತದೇಹಗಳ ಅವಶೇಷಗಳಿವೆ ಎಂದು ಹೇಳಿಕೆಗಳು ಬಂದಿದ್ದವು.


ಇದೇ ಹಿನ್ನೆಲೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಅನುಮತಿ ಪಡೆದು ಎಸ್ಐಟಿ  ಇಂದು ಬಂಗ್ಲೆಗುಡ್ಡದಲ್ಲಿ ಪರಿಶೀಲನೆ ಆರಂಭಿಸಿತ್ತು. ಶೋಧ ಕಾರ್ಯದ ವೇಳೆ ಪತ್ತೆಯಾದ ಅಸ್ತಿಪಂಜರದ ತುಣುಕುಗಳನ್ನು SIT ಅಧಿಕಾರಿಗಳು ಸಂಗ್ರಹಿಸಿದ್ದು, ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

error: No Copying!