gettyimages-133268889-612x612.jpg
Spread the love

ಉಡುಪಿ: ದಿನಾಂಕ 17/09/2025 (ಹಾಯ್ ಉಡುಪಿ ನ್ಯೂಸ್) ನಗರದ ಮೂಡನಿಡಂಬೂರು ಗ್ರಾಮದ ಗರಡಿ ರಸ್ತೆಯಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಯುವಕನನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗೋಪಾಲಕೃಷ್ಣ ಜೋಗಿ ಅವರಿಗೆ ದಿನಾಂಕ:16-09-2025 ರಂದು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಗರಡಿ ರಸ್ತೆಯಲ್ಲಿ 1ನೇ ಅಡ್ಡ ರಸ್ತೆಯಲ್ಲಿರುವ ಜಾನ್ ಹೇವೆನ್ ಕಂಸ್ಟ್ರಕ್ಷನ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ KA-20-HC-0462 ನೇ ನಂಬ್ರದ ಸ್ಕೂಟಿಯಲ್ಲಿ ವ್ಯಕ್ತಿಯೋರ್ವ ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡಲು ಹೊಂದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ದಾಳಿ ನಡೆಸಿ ಆರೋಪಿ ಇಕ್ಬಾಲ್ (33), ಮೂಡನಿಡಂಬೂರು ಗ್ರಾಮ, ಉಡುಪಿ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನು ನಿಷೇಧಿತ ಮಾದಕ ವಸ್ತು ಗಾಂಜಾ ಮತ್ತು MDMA ಯನ್ನು ಸ್ಕೂಟಿಯಲ್ಲಿ ಇಟ್ಟುಕೊಂಡು ಉಡುಪಿ-ಮಣಿಪಾಲ ಕಡೆಗಳಲ್ಲಿ ಮಾರಾಟಮಾಡುತ್ತಿರುವುದಾಗಿ ತಿಳಿಸಿದ್ದು, ಗಾಂಜಾ ಮತ್ತು MDMA ಯನ್ನು ಬೆಂಗಳೂರಿನ ಯಾಸೀನ್ ಎಂಬಾತನು ನೀಡುತ್ತಿರುವುದಾಗಿ ತಿಳಿಸಿದ್ದು, ನಂತರ ಆರೋಪಿಯ ಸ್ಕೂಟಿಯನ್ನು  ಪೊಲೀಸರು ಶೋಧಿಸಿದಾಗ ಅದರಲ್ಲಿ  ಮಾರಾಟ ಮಾಡಲು ಹೊಂದಿದ್ದ 1) ಪ್ಲಾಸ್ಟಿಕ್ ಕವರ್ ಸಮೇತ 205 ಗ್ರಾಂ ತೂಕದ ಗಾಂಜಾ ಅಂದಾಜು ಮೌಲ್ಯ 12,600/- ರೂಪಾಯಿಗಳು, 2) ಜಿಪ್ ಲಾಕ್ ನ್ನು ಹೊಂದಿರುವ ಪ್ಲಾಸ್ಟಿಕ್ ಕವರ್ ಸಮೇತ 0.49 ಗ್ರಾಂ ತೂಕದ MDMA  ಅಂದಾಜು ಮೌಲ್ಯ 1000/- ರೂಪಾಯಿಗಳು, 3) ಜಿಪ್ ಲಾಕ್ ನ್ನು ಹೊಂದಿರುವ ಪ್ಲಾಸ್ಟಿಕ್ ಕವರ್ ಸಮೇತ 0.49 ಗ್ರಾಂ ತೂಕದ MDMA  ಅಂದಾಜು ಮೌಲ್ಯ 1000/- ರೂಪಾಯಿಗಳು, 4) ಜಿಪ್ ಲಾಕ್ ನ್ನು ಹೊಂದಿರುವ ಪ್ಲಾಸ್ಟಿಕ್ ಕವರ್ ಸಮೇತ 0.33 ಗ್ರಾಂ ತೂಕದ MDMA  ಅಂದಾಜು ಮೌಲ್ಯ 500/- ರೂಪಾಯಿಗಳು, 5)ATOM ಕಂಪನಿಯ ಸಿಲ್ವರ್ ಬಣ್ಣದ ವೇಯಿಂಗ್ ಮಷಿನ್ ಅಂದಾಜು ಮೌಲ್ಯ 200/- ರೂಪಾಯಿಗಳು, 6)ಕಪ್ಪು ಬಣ್ಣದ ಬಾಕ್ಸ್ ಅಂದಾಜು ಮೌಲ್ಯ 200/- ರೂಪಾಯಿಗಳು, 7)ಜಿಪ್-ಲಾಕ್ ಹೊಂದಿರುವ 52 ಪ್ಲಾಸ್ಟಿಕ್ ಕವರ್ ಗಳ ಅಂದಾಜು ಮೌಲ್ಯ 10 ರೂಪಾಯಿಗಳು, 8) Electonic wepe ಮತ್ತು 3 ಪ್ಲಾಸ್ಟಿಕ್ ಫಿಲ್ಟರ್ ಗಳ ಅಂದಾಜು ಮೌಲ್ಯ 10/- ರೂಪಾಯಿಗಳು, 9)ಕಪ್ಪು ಬಣ್ಣದ ಒಪ್ಪೊ  ಕಂಪನಿಯ ಮೊಬೈಲ್ ಫೋನ್ ಅಂದಾಜು ಮೌಲ್ಯ 8000/- ರೂಪಾಯಿಗಳು, 10) ಕಂದು ಬಣ್ಣದ ಪರ್ಸ್ ನಲ್ಲಿದ್ದ ನಗದು 4760/- ರೂಪಾಯಿಗಳು, 11) ಕಂದು ಬಣ್ಣದ ಪರ್ಸ್, 12) ವೇಯಿಂಗ ಮೆಷಿನ್ ಅಂದಾಜು ಮೌಲ್ಯ 600/- ರೂಪಾಯಿಗಳು, 13)  ಹ್ಯಾಂಡ್ ಬ್ಯಾಗ್ 14) ಹಳದಿ ಬಣ್ಣದ ಕೈಚೀಲ ಮತ್ತು 15) KA-20-HC-0462 ನೇ ನಂಬ್ರದ ಟಿವಿಎಸ್ ಜುಪೀಟರ್ ಕಂಪನಿಯ ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: NARCOTIC DRUGS & PSYCHOTROPIC SUBSTANCES ACT, 1985 (U/s-8(C) 20(b)(Ⅱ)(A) ರಂತೆ ಪ್ರಕರಣ ದಾಖಲಾಗಿದೆ. 

error: No Copying!