ಉಡುಪಿ: ದಿನಾಂಕ: 17-09-2025(ಹಾಯ್ ಉಡುಪಿ ನ್ಯೂಸ್) ವಯೋವೃದ್ಧ ರೋರ್ವರನ್ನು ಆರೈಕೆ ಮಾಡುತ್ತಿದ್ದ ಹೋಮ್ ನರ್ಸ್ ಓರ್ವಳು ಮನೆಯಲ್ಲಿದ್ದ 15 ಲಕ್ಷದ ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಿವಾಸಿ ನಮ್ರತಾ (54) ಎಂಬವರ ತಾಯಿ ನಾಗಮಾಲಿನಿ ರವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ಪಾರ್ಕಿನ ಬಳಿಯಿರುವ ಪಾರ್ಕ್ ರೆಸಿಡೆನ್ಸಿಯ 5ನೇ ಮಹಡಿಯ ಫ್ಲಾಟ್ ನಂಬ್ರ 502 ರ ನಿವಾಸಿಯಾಗಿದ್ದು, ನಮ್ರತಾ ರವರ ತಾಯಿ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ದಿನಾಂಕ 13/07/2025 ರಂದು ಜಸಿಂತಾ ಎಂಬುವವರನ್ನು ಹೋಂ ನರ್ಸ್ ಕೆಲಸಕ್ಕೆ ನೇಮಿಸಿಕೊಂಡಿದ್ದು, ಜಸಿಂತಾ ರವರು ದಿನಾಂಕ 13/07/2025 ರಿಂದ ದಿನಾಂಕ 18/07/2025 ರಂದು ಮಧ್ಯಾವಧಿಯಲ್ಲಿ ನಮ್ರತಾ ರವರ ತಾಯಿಯ ಮನೆಯಲ್ಲಿ ಪರ್ಸೊಂದರಲ್ಲಿಟ್ಟಿದ್ದ 1) 20 ಗ್ರಾಂ ತೂಕದ ಚಿನ್ನ-ವಜ್ರ ಹರಳನ್ನು ಹೊಂದಿದ್ದ ಬಳೆ ಮೌಲ್ಯ 8 ಲಕ್ಷ ರೂಪಾಯಿಗಳು, 2) 44 ಗ್ರಾಂ ತೂಕದ ವಜ್ರದ ಪದಕವನ್ನು ಹೊಂದಿದ ಚಿನ್ನದ ಸರದ ಮೌಲ್ಯ 7 ಲಕ್ಷ ರೂಪಾಯಿಗಳು ಒಟ್ಟಾರೆಯಾಗಿ 15 ಲಕ್ಷ ರೂಪಾಯಿ ಮೌಲ್ಯದ ವಜ್ರ-ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಮ್ರತಾ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 306 BNS ರಂತೆ ಪ್ರಕರಣ ದಾಖಲಾಗಿದೆ.
