images-7.jpeg
Spread the love

ಹಿರಿಯಡ್ಕ: ದಿನಾಂಕ:17-09-2025 (ಹಾಯ್ ಉಡುಪಿ ನ್ಯೂಸ್) ಜಿಲ್ಲಾ ಕಾರಾಗೃಹದಲ್ಲಿದ್ದ  ವಿಚಾರಣಾಧೀನ ಖೈದಿ ಯೋರ್ವ ಸಹ ಖೈದಿಗೆ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ  ಜಿಲ್ಲಾ ಕಾರಾಗೃಹದ ಅಧೀಕ್ಷಕರಾಗಿರುವ ವಿಜಯ ಕುಮಾರ್ ಚವ್ಹಾಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದಿನಾಂಕ 16/09/2025 ರಂದು  ಹಿರಿಯಡ್ಕ ಕಾಜರಗುತ್ತು ಕಾರಾಗೃಹದಲ್ಲಿರುವ ವಿಚಾರಣಾ ಖೈದಿ  ಇಸಾಕ್ ಎಂಬುವವನು ಬೆಳಿಗ್ಗೆ  ಹೊತ್ತು ಸಹ ಖೈದಿ  ರವಿಚಂದ್ರನ್ ಎಂಬುವವನ ಮೇಲೆ ಕೈಯಲ್ಲಿ ಸ್ಟೀಲ್ ಚೆಂಬು ಸಿಕ್ಕಿಸಿಕೊಂಡು ಹಿಂದಿನಿಂದ ತಲೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಕರ್ತವ್ಯ ನಿರತ ಸಿಬ್ಬಂದಿಯವರು ಓಡಿ ಹೋಗಿ ನೋಡಿದಾಗ ಹಲ್ಲೆ ಮಾಡಿದ ಇಸಾಕ್ ಎಂಬ ಖೈದಿಯು  ಕೈಯಲ್ಲಿ ಚೆಂಬು ಸಿಕ್ಕಿಸಿಕೊಂಡಿದ್ದನ್ನು ತೆಗೆಸಿ  ವಿಚಾರಿಸಿದಾಗ ಸಹ ಖೈದಿ ರವಿಚಂದ್ರನ್ ರೂಮಿನಲ್ಲಿ ವಾಕಿಂಗ್ ಮಾಡುತ್ತಿದ್ದಾನೆಂಬ ಕ್ಷುಲ್ಲಕ ಕಾರಣ ನೀಡಿರುತ್ತಾನೆ.

ಹಲ್ಲೆಗೊಳಗಾದ ರವಿಚಂದ್ರನ್ ರವರ ಎಡಕಿವಿಯ ಹಿಂಭಾಗದ ತಲೆಯಲ್ಲಿ ಗಾಯವಾಗಿ ರಕ್ತ ಬಂದಿದ್ದು ಚಿಕಿತ್ಸೆಯ ಬಗ್ಗೆ  ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ವಿಚಾರಣಾಧೀನ ಖೈದಿ ಇಸಾಕ್ ಇತನು ವಿನಾಃ ಕಾರಣ ಸಹಖೈದಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದು ಕಾರಾಗೃಹ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾನೆ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ವಿಜಯಕುಮಾರ್ ಚವ್ಹಾಣ ಅವರು ದೂರನ್ನು ನೀಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಕಲಂ: 118(2), 351(2) BNS ರಂತೆ ಪ್ರಕರಣ ದಾಖಲಾಗಿದೆ.  

error: No Copying!