Spread the love

ಉಡುಪಿ: ಮಾ29(ಹಾಯ್ ಉಡುಪಿ ನ್ಯೂಸ್) ವರದಕ್ಷಿಣೆ ಹಣಕ್ಕಾಗಿ ಗಂಡನ ಮನೆಯಲ್ಲಿ ಮಾನಸಿಕ , ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ಉಡುಪಿ ನಿವಾಸಿ ಅನಿತಾ ಎಂಬವರು ದೂರು ನೀಡಿರುತ್ತಾರೆ.

ಉಡುಪಿ ನಿವಾಸಿ ಶ್ರೀಮತಿ ಅನಿತಾ ಇವರ ವಿವಾಹವು ಸತೀಶ್ ಪೂಜಾರಿ ಎಂಬವರೊಂದಿಗೆ ದಿನಾಂಕ 15-02-21ರಂದು ಮಂದಾರ್ತಿ ಶ್ರೀ ದುರ್ಗಾ ಸನ್ನಿಧಿ ಸಭಾಭವನದಲ್ಲಿ ನಡೆದಿರುತ್ತದೆ. ಮದುವೆಯ ನಂತರ ಗಂಡ ಸತೀಶ್ ಪೂಜಾರಿಯ ದುಶ್ಚಟಗಳ ಬಗ್ಗೆ ಅನಿತಾರಿಗೆ ಗೊತ್ತಾಗಿದೆ. ಸತೀಶ್ ಪೂಜಾರಿಗೆ ಇಸ್ಪೀಟ್ ಜುಗಾರಿ ಆಡುವ ಅಭ್ಯಾಸವಿದ್ದು ಜುಗಾರಿ ಆಟದಿಂದ ನಷ್ಟ ವಾದಾಗ ತಾಯಿ ಮನೆಯಿಂದ ಹೆಚ್ಚಿನ ಹಣ ತರುವಂತೆ ಹೆಂಡತಿ ಅನಿತಾರನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ನಿರಾಕರಿಸಿದರೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಅನಿತಾರ ತಾಯಿ ಮನೆಯವರು ಮಾಡಿಸಿ ಕೊಟ್ಟಿದ್ದ ಚಿನ್ನಾಭರಣ ಎಲ್ಲವನ್ನೂ ಬ್ಯಾಂಕ್ ನಲ್ಲಿ ಅಡವಿರಿಸಿದ್ದ ಸತೀಶ್ ಪೂಜಾರಿ ತವರು ಮನೆಯಿಂದ ಹೆಚ್ಚಿನ ಹಣ ತರುವಂತೆ ಪೀಡಿಸುತ್ತಿದ್ದನಂತೆ.

ಈ ವಿಚಾರಗಳನ್ನು ಅನಿತಾರವರು ತನ್ನ ತವರು ಮನೆಯಲ್ಲಿ ತಿಳಿಸಿದ್ದಕ್ಕಾಗಿ ಸತೀಶ ಪೂಜಾರಿ ಅನಿತಾರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.ಸತೀಶ್ ಪೂಜಾರಿ ಯೊಂದಿಗೆ ಆತನ ತಾಯಿ,ರತಿ ಪೂಜಾರಿ,ಆತನ ಅಕ್ಕ ಶ್ಯಾಮಲಾ ಪೂಜಾರಿ ಕೂಡ ಅನಿತಾರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ ಎಂದು ದೂರು ನೀಡಿದ್ದಾರೆ.ಈ ಬಗ್ಗೆ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!