unnamed.jpg
Spread the love

ಬ್ರಹ್ಮಾವರ: ದಿನಾಂಕ:13-09-2025(ಹಾಯ್ ಉಡುಪಿ ನ್ಯೂಸ್) ಹೇರೂರು ಗ್ರಾಮದಲ್ಲಿರುವ ಸುಪ್ರೀಂ ಫೀಡ್ಸ್ ಕಂಪೆನಿಗೆ ಹರಿಯಾಣದಲ್ಲಿರುವ ಕಂಪೆನಿಯೊಂದು ಒಂದು ಕೋಟಿ ಎಂಭತ್ತೈದು ಲಕ್ಷ ರೂಪಾಯಿ ವಂಚನೆ ನಡೆಸಿದೆ ಎಂದು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ಠಾಣಾ ಸರಹದ್ದಿನ 52 ನೇ ಹೇರೂರು ಗ್ರಾಮದ ರಾಹೆ 66 ರ ಸಮೀಪ ಇರುವ ಸುಪ್ರೀಂ ಫೀಡ್ಸ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ನಲ್ಲಿ ಆಡಳಿತ ನಿರ್ದೇಶಕರಾಗಿರುವ  ರವಿ ಕೆ. (34 ) ಅವರು ಅವರ ಕಾರ್ಖಾನೆಗೆ ಕಚ್ಚಾ ಸಾಮಾಗ್ರಿಗಳ ಸಂಗ್ರಹಣ ಘಟಕವನ್ನು ನಿರ್ಮಿಸುವ ಬಗ್ಗೆ, ಹರಿಯಾಣದಲ್ಲಿರುವ “ಬೆನ್‌ ಮತ್ತು ಗಾವ್ಸ್‌ ಪ್ರೈವೇಟ್‌ ಲಿಮಿಟೆಡ್” ಸಂಸ್ಥೆ ಯ ನಿರ್ದೇಶಕರಾದ 1 ನೇ ಆರೋಪಿ ದ್ವೈಪಾಯನ್‌ ದತ್ತ ರವರು ದಿನಾಂಕ 14/03/2023 ರಂದು ನೀಡಿದ ಸರಕುದರ ಪಟ್ಟಿ ನಮೂನೆಯ ಪ್ರಕಾರ ಆಧುನಿಕ ಸಂಗ್ರಹಣ ಘಟಕವನ್ನು ಮಾಡಿಕೊಡುವುದಾಗಿ ರವಿ ಕೆ. ಅವರನ್ನು ನಂಬಿಸಿದ್ದು , ಅದರಂತೆ  ರವಿ ಕೆ.ರವರು ದಿನಾಂಕ 11.04.2023, ದಿನಾಂಕ 07.05.2024 ಮತ್ತು ದಿನಾಂಕ 08.05.2024 ರ ಪ್ರಕಾರ 3 ಕಂತುಗಳ ಮೂಲಕ ಆರೋಪಿತರ ಕಂಪೆನಿಗೆ ಆರ್‌.ಟಿ.ಜಿ.ಎಸ್‌ ಮುಖಾಂತರ ರೂ. 1,45,00,000/- ಹಣವನ್ನು ಮುಂಗಡವಾಗಿ ಹಾಗೂ ಹೆಚ್ಚುವರಿಯಾಗಿ ರೂ. 40,03,311/- ಹಣವನ್ನು ಪಾವತಿಸಿರುತ್ತಾರೆ ಎಂದಿದ್ದಾರೆ.

  ಹಣವನ್ನು ಪಡೆದುಕೊಂಡು ಈವರೆಗೂ ಆರೋಪಿತರು ಒಪ್ಪಿಕೊಂಡ ರೀತಿಯಲ್ಲಿ ಕಚ್ಚಾ ಸಾಮಾಗ್ರಿಗಳ ಸಂಗ್ರಹಣ ಘಟಕವನ್ನು ನಿರ್ಮಿಸಲು ವಿಫಲವಾಗಿರುತ್ತಾರೆ. ಅಲ್ಲದೇ ದಿನಕ್ಕೊಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಆರೋಪಿತರು ರವಿ.ಕೆರವರಿಗೆ ಮೋಸ ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿ, ರವಿ ಕೆ.ರವರ ಕಂಪೆನಿಗೆ ನಷ್ಟವುಂಟು ಮಾಡಿರುತ್ತಾರೆ ಎಂದಿದ್ದಾರೆ.

1 ನೇ ಆರೋಪಿ ದ್ವೈಪಾಯನ್ ದತ್ತ ನ ಈ ಕೃತ್ಯಕ್ಕೆ ಆರೋಪಿತರಾದ 2ನೇ ನೇಸರ್‌ ಅಲಂ, 3ನೇ ಅಂಕುರ್‌ ಗುಪ್ತಾ, 4ನೇ ಮಧು ಗುಪ್ತಾ, 5ನೇ ಉಮೇಶ್‌ ರಾವತ್‌ ಮತ್ತು 6ನೇ ಉಜ್ವಲ್‌ ಸಿಂಗ್‌ರವರು ಸಹಕರಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ   ಕಲಂ 316, 318, 340 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!