ಕುಂದಾಪುರ: ದಿನಾಂಕ:13-09-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಹಣ ನೀಡದಿದ್ದರೆ ವಿಚ್ಛೇದನ ಕೊಡುತ್ತೇವೆ ಎಂದು ತವರು ಮನೆಗೆ ಹೋಗುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ಕಸಬ ಗ್ರಾಮದ ನಿವಾಸಿ ಶ್ರೀಮತಿ ಸುಷ್ಮಾ (26) ಎಂಬವರ ನಿಶ್ಚಿತ್ಥಾರ್ಥವು ನಿತೀಶ್ ಎನ್ ಎಂಬವನೊಂದಿಗೆ ದಿನಾಂಕ : 16-10-2023 ರಂದು ಆಗಿರುತ್ತದೆ ಎಂದೂ ಸುಷ್ಮಾ ರವರು ದಿನಾಂಕ 08/12/2023 ರಂದು ನಿತೀಶ್ ಎನ್ ನೊಂದಿಗೆ ಶ್ರೀ ವೇಣುಗೋಪಾಲ ಕೃಷ್ಣ ಸಭಾಭವನ ಎಲ್ ಐ ಸಿ ರಸ್ತೆ ವ್ಯಾಸರಾಜ ಮಠ ಕುಂದಾಪುರದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿರುತ್ತಾರೆ ಎಂದಿದ್ದಾರೆ.
ಮದುವೆಯಾದ ನಂತರ ಸುಷ್ಮಾ ರವರು ಗಂಡನ ಮನೆಯಾದ ಮಂಗಳೂರಿನ ಕುಲಶೇಖರ ಅಂಚೆ ಮರೋಳಿ ಪಂಪು ಹೌಸ್, ಸೌಜನ್ಯ ನಿಲಯ ಎಂಬ ಮನೆಗೆ ಹೋಗಿರುತ್ತಾರೆ.
ಗಂಡ ನಿತೇಶ್‌ನು ಮದುವೆಯ ಪೂರ್ವದಲ್ಲಿ ಮಂಗಳೂರಿನ MRPL ನಲ್ಲಿ ಮೆಕಾನಿಕಲ್ ಮೇಂಟೆನೆನ್ಸ್ ಇಂಜಿನಿಯರ್ ಎಂದು ಸುಳ್ಳು ಹೇಳಿರುವ ವಿಚಾರ ಸುಷ್ಮಾ ರವರಿಗೆ ಮದುವೆಯಾದ 1ನೇ ವಾರದಲ್ಲಿ ತಿಳಿಯುತ್ತದೆ. ಮದುವೆಯಾದ 4-5 ದಿನಗಳಲ್ಲಿ ಸುಷ್ಮಾ ರವರಿಗೆ ಗಂಡ ನಿತೀಶ ನು “ ನೀನು ಅಲ್ಲಿಗೆ ಯಾಕೆ ಹೋದೆ , ಅವರ ಹತ್ತಿರ ಯಾಕೆ ಮಾತನಾಡಿದೆ” ಅಂದು ಮಾನಸಿಕ ಹಿಂಸೆ ನೀಡುತ್ತಿದ್ದರು ಮತ್ತು ಸುಷ್ಮಾ ರವರಿಗೆ ಆರೋಪಿತರಾದ ನಿತೀಶ್ ಎನ್, ನಾಗೇಶ್ ಕೆ , ವಿಮಲ , ಪಲ್ಲವಿ, ಪ್ರತೀಕ್ ಪಂಪು ಹೌಸ್ ಮರೋಳಿ ಕುಲಶೇಖರ ಇವರೆಲ್ಲರೂ ಸೇರಿ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದರು ಅಲ್ಲದೇ ಅವಾಚ್ಯ ಶಬ್ದದಿಂದ ಬೈದು ಹಾಗೂ ಬೆದರಿಸುತ್ತಿದ್ದರು ಎಂದಿದ್ದಾರೆ.
ಆರೋಪಿತರು ಎಲ್ಲರೂ ಸೇರಿ ತಮಗೆ ಮನೆ ಕಟ್ಟಲು ನೀನು ಹಣದ ಸಹಾಯ ಮಾಡಬೇಕು ಇಲ್ಲದಿದ್ದರೆ ನನ್ನ ಅಣ್ಣನಿಂದ ನಿನಗೆ ವಿಚ್ಚೇದನ ಕೊಡಿಸುತ್ತೇನೆ ಎಂದು ಬೆದರಿಸುತ್ತಿದ್ದರು, ಮತ್ತು ಆರೋಪಿತರು ಸೇರಿ ಸುಷ್ಮಾ ರವರನ್ನು ಉದ್ದೇಶಿಸಿ ನೀನು ಇಲ್ಲಿ ಇರಬೇಕಾದರೆ ನಿನ್ನ ತಂದೆ ತಾಯಿಯಿಂದ 60 ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಬಾ ಇಲ್ಲವಾದಲ್ಲಿ ವಿಚ್ಚೇದನ ನೀಡು ಎಂದು ಒಂದೊಮ್ಮೆ ಇಲ್ಲೇ ಇದ್ದರೆ ಇಲ್ಲವಾಗಿಸಿ ಬೀಡುತ್ತೇವೆ” ಎಂದು ಬೆದರಿಕೆ ಹಾಕಿರುತ್ತಾರೆ ಎಂದಿದ್ದಾರೆ.
ದಿನಾಂಕ 11-08-2025 ರಂದು ಗಂಡ ನಿತೇಶನು ಸುಷ್ಮಾ ರವರ ತವರು ಮನೆಗೆ ಬಂದು ಸುಷ್ಮಾ ರವರನ್ನು ಹಾಗೂ ಸುಷ್ಮಾ ರವರ ತಂದೆ ಮತ್ತು ತಾಯಿಯನ್ನು ಉದ್ದೇಶೀಸಿ ಅವಾಚ್ಯ ಶಬ್ದದಿಂದ ಬೈದು ನನಗೆ ವಿಚ್ಚೇದನ ನೀಡು ಎಂದು ಸುಷ್ಮಾ ರವರ ಕೊರಳಲ್ಲಿದ್ದ ಮಾಂಗಲ್ಯವನ್ನು ತೆಗೆಯಲು ಕೈ ಮುಂದೆ ಮಾಡಿರುತ್ತಾನೆ ಆ ಸಮಯ ಸುಷ್ಮಾ ರವರ ತಂದೆ ಮತ್ತು ತಾಯಿ ತಡೆಯಲು ಬಂದಾಗ ಸುಷ್ಮಾ ರವರನ್ನು ಹಾಗೂ ಸುಷ್ಮಾ ರವರ ತಂದೆ ತಾಯಿಯನ್ನು ದೂಡಿ ಹಾಕಿದ್ದಾರೆ ಎಂದು ಸುಷ್ಮಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 85 , 352 .351(2), 115(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
