ಕುಂದಾಪುರ: ಮಾ27(ಹಾಯ್ ಉಡುಪಿ ನ್ಯೂಸ್) ಆರ್.ಟಿ.ಐ ಕಾರ್ಯಕರ್ತ ಸದಾಶಿವ ಕೋಟೆಗಾರ್ ರವರಿಗೆ ಅಪರಿಚಿತರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕುಂದಾಪುರ ,ಕಸಬಾ ಗ್ರಾಮದ ಕುಂದೇಶ್ವರ ದೇವಸ್ಥಾನ ಹತ್ತಿರ ದ ನರಿಗುಡ್ಡೆ ಮನೆ ನಿವಾಸಿ ಸದಾಶಿವ ಕೋಟೆಗಾರ್ ರವರು ಹಲ್ಲೆಗೊಳಗಾದ ವ್ಯಕ್ತಿ. ಸದಾಶಿವ ಕೋಟೆಗಾರ್ ರವರು ಕುಂದಾಪುರದ ನವೀನ್ ಡ್ರೈ ವ್ ಇನ್ ಬಾರಿನ ಬಳಿಯ ಓಣಿ ಯಲ್ಲಿ ನಿಂತಿರುವಾಗ ಪರಿಚಯವಿಲ್ಲದ ನಾಲ್ಕು ಜನ ಅಪರಿಚಿತರು ಸದಾಶಿವ ಕೋಟೆಗಾರ್ ರವರ ಬಳಿ ಬಂದು ಇಬ್ಬರು ಅವರನ್ನು ನೆಲಕ್ಕೆ ದೂಡಿ ಹಾಕಿದ್ದು ಓರ್ವನು ಕಾಲಿಗೆ ದೊಣ್ಣೆಯಿಂದ ಹೊಡೆದಿದ್ದು ಇನ್ನಿಬ್ಬರು ರಾಡ್ ಮತ್ತು ತಲವಾರು ಹಿಡಿದು ಕೊಂಡಿದ್ದು ಎಲ್ಲರೂ ಸೇರಿ ಸದಾಶಿವ ಕೋಟೆಗಾರ್ ರನ್ನು ಕಾಲಿನಿಂದ ತುಳಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಸದಾಶಿವ ಕೋಟೆಗಾರ್ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ರಮ ವ್ಯವಹಾರಗಳ ಕುರಿತು ಆರ್ ಟಿ ಐ ದಾಖಲೆ ಸಂಗ್ರಹಿಸಿರುವ ಬಗ್ಗೆ ಸಿಟ್ಟಾಗಿರುವವರು ಈ ಕ್ರತ್ಯ ವೆಸಗಿದ್ದಾರೆ ಎಂದು ನೀಡಿರುವ ದೂರಿನಂತೆ ಕುಂದಾಪುರ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.