Spread the love

(ಹಾಯ್ ಉಡುಪಿ ನ್ಯೂಸ್ ) ವಿವಿ ದಾಸಯ್ಯ ಅವರ ನಿರ್ಮಾಣದ ಅಲಿಯಾ ಭಟ್ ,ಸಮುದ್ರಕನಿ ,ಅಜಯ್ ದೇವಗನ್,ರೇಸ್ಟೀವನ್ಸನ್,ಅಲಿಸನ್ ಡೂಡಿ ಮತ್ತು ಒಲಿವಿಯಾ ಮಾರಿಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಆರ್ ಆರ್ ಆರ್ ಸಿನಿಮಾ ಭರ್ಜರಿಯಾಗಿ ಒಂದೇ ದಿನಕ್ಕೆ 200ಕೋಟಿ ರೂಪಾಯಿ ಬಾಚಿ ಕೊಂಡಿದೆ.

ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆರ್ ಆರ್ ಆರ್ ಸಿನಿಮಾದ್ದಾಗಿದೆ. ರಾಮ್ ಚರಣ್ ಅಲ್ಲೂರಿಯು ಸೀತಾರಾಮ ರಾಜು ಪಾತ್ರ ದಲ್ಲಿ ಹಾಗೂ ಜೂನಿಯರ್ ಎನ್ ಟಿಆರ್ ಕೋಮರಂ ಭೀಮ್ ಪಾತ್ರ ದಲ್ಲಿ ಅಭಿನಯಿಸಿದ್ದಾರೆ.

ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಯುಕೆ ಯಲ್ಲೂ ಚಿತ್ರ ಭರ್ಜರಿ ಯಾಗಿ ತೆರೆ ಕಂಡಿದ್ದು ಬಾಕ್ಸ್ ಆಫೀಸ್ ಹಿಟ್ ಆಗಿದೆ ಎನ್ನಲಾಗಿದೆ ನಿರ್ದೇಶಕ ರಾಜಮೌಳಿ ನಿರ್ದೇಶನದ ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಅಭಿನಯಿಸಿದ ಬಹುನಿರೀಕ್ಷಿತ ಚಿತ್ರ ಅಂತಿಮವಾಗಿ ಬಿಡುಗಡೆಯಾಗಿ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ತೆಲುಗು ರಾಜ್ಯ ಗಳಲ್ಲಿ ಸಿನಿಮಾದ ಟಿಕೇಟುಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆಯಂತೆ.

error: No Copying!