Spread the love

ಬ್ರಹ್ಮಾವರ: ದಿನಾಂಕ:10-08-2025 (ಹಾಯ್ ಉಡುಪಿ ನ್ಯೂಸ್)  ಹಾರ್ದಳ್ಳಿ ಮಂಡಳ್ಳಿ ಗ್ರಾಮದ ನಿವಾಸಿ ಭಾರತಿ ಎಂಬವರಿಗೆ ಸುಶೀಲ ಎಂಬಾಕೆ ನಂಬಿಸಿ ಚಿನ್ನಾಭರಣ, ಹಣಕಾಸು ಪಡೆದು ವಂಚಿಸಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಹಾರ್ದಳ್ಳಿ ನಿವಾಸಿ ಭಾರತಿ (45) ಎಂಬವರ ಪರಿಚಯದ ಸುಶೀಲಾ ಎಂಬುವವರು ಭಾರತಿರವರನ್ನು ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಸಮಿತಿ ಎಂಬ ಸಂಘಕ್ಕೆ ಮೆಂಬರ್‌ ಆಗಲು ತಿಳಿಸಿ  ಆ ಸಂಘಕ್ಕೆ ಮಾಸಿಕ 200 ರೂ ಮತ್ತು 1,50,000 ರೂ ಡೆಪಾಸಿಟ್‌ ಇಟ್ಟಲ್ಲಿ ಸಂಘಟನೆಯು 1,50,000/- ರೂಪಾಯಿ ಸೇರಿಸಿ ಒಟ್ಟು 3,00,000/- ರೂಪಾಯಿ ಡಿಪಾಸಿಟ್‌ ಮಾಡಿ ತಿಂಗಳಿಗೆ 20,000 ರೂಪಾಯಿ ಬರುತ್ತದೆ ಎಂದು ನಂಬಿಸಿದ್ದು, ಭಾರತಿ ರವರಲ್ಲಿ ಹಣ ಇಲ್ಲದೇ ಇರುವ ಕಾರಣ ಆರೋಪಿತೆ ಸುಶೀಲಾಳು ಭಾರತಿರವರ 23 ಗ್ರಾಂ ತೂಕದ ಪೆಂಡೆಂಟ್‌ ಇರುವ ಚಿನ್ನದ ಸರವನ್ನು ಹಾಗೂ 9 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟನ್ನು ದಿನಾಂಕ: 04-09-2024 ರಂದು ಬ್ರಹ್ಮಾವರದ ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಲ್ಲಿ  ಆರೋಪಿತೆ ಸುಶೀಲಳ ಹೆಸರಿನಲ್ಲಿ ಅಡಮಾನವಿರಿಸಿ ಅಲ್ಲಿಂದ 150000 ರೂ ಸಾಲವನ್ನು ನಗದಾಗಿ ಪಡೆದುಕೊಂಡು ಅದನ್ನು ಸಂಘಕ್ಕೆ ಕಟ್ಟುವುದಾಗಿ ತಿಳಿಸಿ ತೆಗೆದುಕೊಂಡು ಹೋಗಿರುತ್ತಾಳೆ ಎಂದೂ. ತದನಂತರ ಭಾರತಿರವರಿಗೆ ಯಾವುದೇ ಹಣ ಬರದೇ ಇದ್ದು ಆರೋಪಿತೆ ಸುಶೀಲಳ ನ್ನು ಕೇಳಿದಾಗ ಆಕೆಯು ಸ್ವಲ್ಪ ಸಮಸ್ಯೆಯಲ್ಲಿರುವುದಾಗಿ ತಿಳಿಸಿದ್ದು ಸೊಸೈಟಿಯಲ್ಲಿ ವಿಚಾರಿಸಿದಾಗ ಚಿನ್ನಾಭರಣವನ್ನು ಸುಶೀಲಾಳು 2025 ನೇ ಮೇ ತಿಂಗಳಲ್ಲಿ ಬಿಡಿಸಿಕೊಂಡು ಹೋಗಿರುವುದಾಗಿ ತಿಳಿದುಬಂದಿರುತ್ತದೆ.

ಆರೋಪಿತೆ ಸುಶೀಲಳು ಭಾರತಿರವರನ್ನು ವಂಚಿಸುವ ಉದ್ದೇಶದಿಂದ ಚಿನ್ನಾಭರಣವನ್ನು ಪಡೆದು ಆ ಚಿನ್ನಾಭರಣವನ್ನು ಅಡವಿರಿಸಿ ಅಡಮಾನದ ಹಣವನ್ನು ಆಕೆಯ ಸ್ವಂತಕ್ಕೆ ಅಪ್ರಾಮಾಣಿಕವಾಗಿ ಉಪಯೋಗಿಸಿಕೊಂಡು, ಚಿನ್ನಾಭರಣಗಳನ್ನು ಕೂಡ ಬಿಡಿಸಿಕೊಂಡು ಹೋಗಿ ಅದನ್ನು ವಾಪಾಸು ಕೊಡದೇ ಅಕ್ರಮ ಲಾಭ ಪಡೆದು ವಂಚಿಸಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  U/S 318(2)(3)(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!