
ಕೋಟ: ದಿನಾಂಕ 10.08.2025 (ಹಾಯ್ ಉಡುಪಿ ನ್ಯೂಸ್) ವಡ್ಡರ್ಸೆ ಗ್ರಾಮದ ಮಧುವನ ರಿಕ್ಷಾ ನಿಲ್ದಾಣ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿ ಯನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐ ಸುಧಾಪ್ರಭು ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆ ಪಿಎಸ್ಐ ಸುಧಾ ಪ್ರಭು ಅವರಿಗೆ ದಿನಾಂಕ :09-08-2025 ರಂದು ಬ್ರಹ್ಮಾವರ ತಾಲ್ಲೂಕು ವಡ್ಡರ್ಸೆ ಗ್ರಾಮದ ಮಧುವನ ರಿಕ್ಷಾ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡುತ್ತಾ ಇದ್ದವರು ಓಡಿ ಹೋಗಿದ್ದು ಅದರಲ್ಲಿ ರಾಮಣ್ಣ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆತನಿಂದ Mysore lancer ಕಂಪೆನಿಯ 90 Ml ನ 1 ಟೆಟ್ರಾ ಖಾಲಿ ಪ್ಯಾಕ್ ಹಾಗೂ ಮದ್ಯಪಾನ ಮಾಡಲು ಬಳಸಿದ್ದ ಸ್ಟೀಲ್ ಲೋಟ್-2 , ಮಧ್ಯ ತುಂಬಿದ ಟೆಟ್ರಾ ಪ್ಯಾಕ್ 13 ನ್ನು ಸ್ವಾದೀನಪಡಿಸಿಕೊಂಡಿದ್ದು ಸ್ವಾದೀನಪಡಿಸಿಕೊಂಡ ಒಟ್ಟು ಮದ್ಯ 1.620 ಲೀಟರ್ ಆಗಿದ್ದು ಇವುಗಳ ಒಟ್ಟು ಮೌಲ್ಯ 845/- ರೂಪಾಯಿ ಆಗಿರುತ್ತದೆ .
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 15(A) K.E ACT ರಂತೆ ಪ್ರಕರಣ ದಾಖಲಾಗಿದೆ.