
ಬ್ರಹ್ಮಾವರ: ದಿನಾಂಕ:10-08-2025(ಹಾಯ್ ಉಡುಪಿ ನ್ಯೂಸ್) ಅಪರಿಚಿತ ವ್ಯಕ್ತಿಯೋರ್ವ ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯಿಸಿಕೊಂಡು ಹಣವನ್ನು ಹೂಡಿಕೆ ಮಾಡಲು ತಿಳಿಸಿ ವಂಚನೆ ನಡೆಸಿದ್ದಾರೆಂದು ವಂಚನೆಗೊಳಗಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರ ನೀಲಾವರ ನಿವಾಸಿ ವಿನಯ್ ಕುಮಾರ್ (35) ಎಂಬವರಿಗೆ ಅಪರಿಚಿತ ಆರೋಪಿಯೋರ್ವನು ದಿನಾಂಕ: 20.06.2025 ರಂದು instragram ಮುಖಾಂತರ watsapp ನಲ್ಲಿ ಲಿಂಕ್ ಕಳಿಸಿ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದು ವಿನಯ್ ಕುಮಾರ್ ಅವರು ದಿನಾಂಕ:20.06.2025 ರಿಂದ ದಿನಾಂಕ:09.07.2025 ರತನಕ ಒಟ್ಟು 1,53,893 ರೂ ಹಣವನ್ನು ಪೋನ್ ಪೇ QR ಕೋಡ್ ಮುಖಾಂತರ ಪಾವತಿ ಮಾಡಿದ್ದು ಪ್ರಸ್ತುತ ಅಪರಿಚಿತ ಆರೋಪಿಯು ವಿನಯ್ ಕುಮಾರ್ ರವರ ಅಕೌಂಟ್‌ನ್ನು ಬ್ಲಾಕ್ ಮಾಡಿ ಹಣವನ್ನು ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ U/S 66 (C), 66(D) IT Act &318(4)ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.