Spread the love

ದಿನಾಂಕ:04-08-2025(ಹಾಯ್ ಉಡುಪಿ ನ್ಯೂಸ್)

ಕೆ ಆರ್ ಎಸ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್‌ ಎಂದು ಹೇಳಿಕೆ ನೀಡಿದ ಸಚಿವ ಹೆಚ್‌.ಸಿ.ಮಹದೇವಪ್ಪಗೆ ಬಿಜೆಪಿ ಸಂಸದ ಯದುವೀರ್‌ ಒಡೆಯರ್ ಅವರು ತಿರುಗೇಟು ನೀಡಿದ್ದಾರೆ. ರಾಜಕೀಯ ಉದ್ದೇಶದಿಂದ, ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ದೇಶದಲ್ಲಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ. ರಾಜಕಾರಣಿಗಳು ರಾಜಕಾರಣ ಮಾಡಿ, ಇತಿಹಾಸದ ಬಗ್ಗೆ ಹೇಳಬೇಡಿ. ಇತಿಹಾಸ ಹೇಳಲು ತಜ್ಞರಿದ್ದಾರೆ, ಈ ಬಗ್ಗೆ ಸಮೀಕ್ಷೆ ಮಾಡಿಸಲಿ. ಜನರೇ ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳುತ್ತಾರೆ. ಇದು ಒಂದು ಸಮುದಾಯವನ್ನು ಓಲೈಸಲು ನೀಡಿರುವ ಹೇಳಿಕೆ. ಯಾರೂ ಈ ರೀತಿಯ ಹೇಳಿಕೆ‌ ನೀಡಬಾರದು ಎಂದು ಹೇಳಿದರು.

error: No Copying!