Spread the love

ಹುಬ್ಬಳ್ಳಿ : ದಿನಾಂಕ:04-08-2025(ಹಾಯ್ ಉಡುಪಿ ನ್ಯೂಸ್) ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುವ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಕರ್ನಾಟಕದ ನಿರ್ಧಾರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಅಸಮಂಜಸ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಂಗ್ಲಿ ಮತ್ತು ಮಹಾರಾಷ್ಟ್ರದ ಇತರ ಪ್ರದೇಶಗಳಲ್ಲಿ ಯಾವುದೇ ಪ್ರವಾಹ ಸಮಸ್ಯೆ ಇಲ್ಲ ಎಂದು ಈಗಾಗಲೇ ನ್ಯಾಯಮಂಡಳಿಯ ತೀರ್ಪು ಇದೆ. ಆದರೂ ಮಹಾರಾಷ್ಟ್ರದ ಜನರು ಎತ್ತಿರುವ ಸಮಸ್ಯೆ ಅನಗತ್ಯ. ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ, ನಮ್ಮ ಸರ್ಕಾರ ಅದನ್ನು ನೋಡಿಕೊಳ್ಳುತ್ತದೆ. ಅದೇ ರೀತಿ, ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾದರೆ, ಮಹಾರಾಷ್ಟ್ರ ಸರ್ಕಾರ ಅದನ್ನು ನೋಡಿಕೊಳ್ಳಬೇಕು ಎಂದು ಹೇಳಿದರು.
ಆಲಮಟ್ಟಿ ಅಣೆಕಟ್ಟು ನಿರ್ಮಿಸುವ ಮೊದಲು ಸಾಂಗ್ಲಿಯಲ್ಲಿ ಪ್ರವಾಹ ಉಂಟಾಗಿತ್ತು. 2005 ರಲ್ಲಿ ದೊಡ್ಡ ಪ್ರಮಾಣದ ಪ್ರವಾಹವೂ ಉಂಟಾಗಿತ್ತು, ಆಗ ಕೇಂದ್ರ ಜಲ ಆಯೋಗದ ತಂಡ ಬಂದು ಆಲಮಟ್ಟಿ ಅಣೆಕಟ್ಟು ಮತ್ತು ಪ್ರವಾಹದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ವರದಿ ಮಾಡಿತ್ತು. ಆದ್ದರಿಂದ, ಮಹಾರಾಷ್ಟ್ರ ಮುಖ್ಯಮಂತ್ರಿ ಸೃಷ್ಟಿಸುವುದು ಅನಗತ್ಯ ವಿವಾದ, ಇದು ಅಸಮಂಜಸ ಎಂದು ತಿಳಿಸಿದರು.
ನದಿ ಜೋಡಣೆಯ ಬಗ್ಗೆ ಜನಜಾಗೃತಿಯನ್ನು ಮಾಡಿರುವಂತದು ನಮ್ಮ ಹಿಂದಿನ ಪಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಅದರಲ್ಲಿ ಎರಡು ವಿಭಾಗದಲ್ಲಿ ವಿಂಗಡನೆ ಆಯಿತು. ಹಿಮಾಲಯನ್ ನದಿ ಜೋಡಣೆ ಅಂದರೆ ಉತ್ತರದ ನದಿಗಳು, ಮತ್ತೆ ವಿಂದ್ಯ ಪರ್ವತದ ಕೆಳಗೆ ಇರುವ ನದಿ ಜೋಡಣೆ. ನಮಗೆ ಸಂಬಂಧಿಸಿರುವ ಬೆಡ್ತಿ ವರದಾ ನದಿ ಜೋಡಣೆಗೆ ಎನ್‌ಡಬುಡಿಎ ವತಿಯಿಂದ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಇದರದೇ ಆದ ಸವಾಲುಗಳಿದ್ದವು ನಾವು ಮೊದಲನೇ ಪ್ರಸ್ತಾವನೆಯನ್ನು ಜಾರಿಗೆ ತರಲು ಹೋದಾಗ ಪರಿಸರದ ಮೇಲೆ ಪರಿಣಾಮ ಆಗುತ್ತದೆ ಎಂದು ಅದನ್ನು ಮಾರ್ಪಾಡು ಮಾಡಿ ನಾನು ಸಿಎಂ ಆಗಿದ್ದಾಗ ಎನ್ ಡಬ್ಲ್ಯುಡಿಎ ಕಳುಹಿಸಿದ್ದೆವು.
ಅದರಲ್ಲಿ ಕೆಲವು ಮಾರ್ಪಾಡು ಮಾಡಲು ಅವರು ಕಳುಹಿಸಿದ್ದಾರೆ. ಯಾವುದೇ ಪರಿಸರ ಮತ್ತು ಜೈವಿಕ ಹಾನಿಯಾಗದಂತೆ ಲಿಂಕ್ ಮುಖಾಂತರ ಮಾಡುವಂತಹ ಯೋಜನೆ ಇದಾಗಿದೆ. ಎರಡು ಲಿಂಕ್‌ನಲ್ಲಿ ಈ ಯೋಜನೆ ಆಗುತ್ತದೆ. ಬೆಡ್ತಿ ವರದಾ ನ್ಯಾಷನಲ್ ಪ್ರಾಸ್ಪೆಕ್ಟಿವ್ ಪ್ಲಾನ್ ಮತ್ತು ಇನ್ನೊಂದು ಬೆಡ್ತಿ ಧರ್ಮಾ ವರದಾ ಲಿಂಕ್ ಮೂಲಕ ಜೋಡಣೆ ಮಾಡುವುದು. ಎರಡು ಲಿಂಕ್‌ಗಳ ಮೂಲಕ ಯೋಜನೆ ಮಾಡಲು ಎಂಜಿನೀಯರ್‌ಗಳು ಯೋಜನೆ ರೂಪಿಸಿದ್ದಾರೆ ಎಂದರು.

error: No Copying!