Spread the love
  • ಬೈಂದೂರು: ದಿನಾಂಕ :19-07-2025(ಹಾಯ್ ಉಡುಪಿ ನ್ಯೂಸ್) ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರ ಸಂಘದ ಶಾಖೆಯಲ್ಲಿ ಕಳ್ಳತನ ಯತ್ನ ನಡೆದಿದೆ ಎಂದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಕೊಲ್ಲೂರು ನಿವಾಸಿ ನಾಗೇಂದ್ರ (43) ಅವರು ಶ್ರೀ ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರ ಸಂಘದ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಶಾಖೆಯ ಭದ್ರತೆಯ ಬಗ್ಗೆ Sign In Security CCTV  ಕಂಪನಿಯ CCTV ಅಳವಡಿಸಿದ್ದು  ದಿನಾಂಕ 19/07/2025 ರಂದು ಬೆಳಗಿನ ಜಾವ 02:45 ಗಂಟೆ ಸಮಯಕ್ಕೆ Sign In Security CCTV ಕಂಪನಿಯವರು ನಾಗೇಂದ್ರ ರವರಿಗೆ ಕರೆ ಮಾಡಿ ನಾಗೇಂದ್ರ ರವರ ಶಾಖೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕಳ್ಳತನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದ ಮೇರೆಗೆ ನಾಗೇಂದ್ರ ರವರು ಹಾಗೂ ಶಾಖೆ ಯ ಅಧ್ಯಕ್ಷರಾದ ಕೆ ಎಸ್ ಚಂದ್ರಶೇಖರ ರವರು ಸ್ಥಳಕ್ಕೆ ಬಂದಾಗ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
  • ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡುವ ಉದ್ದೇಶದಿಂದ ಶಾಖೆಯ ಕಿಟಕಿಯ ಸರಳನ್ನು ಯಾವುದೋ ಹರಿತವಾದ ಆಯುಧದಿಂದ ತುಂಡು ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ನಾಗೇಂದ್ರ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 331(4),305, 62 BNS ರಂತೆ ಪ್ರಕರಣ ದಾಖಲಾಗಿದೆ.
error: No Copying!