Spread the love

ಗಂಗೊಳ್ಳಿ: ದಿನಾಂಕ:20-07-2025(ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿಯಲ್ಲಿ ಈ ವಾರ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಡೆದ ಘಟನೆಯಲ್ಲಿ ಲೋಹಿತ್ ಖಾರ್ವಿ, ಜಗ್ಗನಾಥ್ ಖಾರ್ವಿ ಮತ್ತು ಸುರೇಶ್ ಖಾರ್ವಿ ಎಂಬ 3 ಜನರು ಸಾವನ್ನಪ್ಪಿದ್ದರು. ದಿನಾಂಕ:- 19/07/2025 ರಂದು   ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವರಾದ ಮಂಕಾಳ ಎಸ್ ವೈದ್ಯ ರವರು ಮರಣ ಹೊಂದಿದ ಪ್ರತಿಯೊಬ್ಬ ಮೀನುಗಾರರ ಮನೆಗೂ ಭೇಟಿ ನೀಡಿ ಪ್ರತಿ ಕುಟುಂಬಕ್ಕೂ 10 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು.

ಜಗನಾಥ್ ಖಾರ್ವಿಯವರ ವಿಷಯದಲ್ಲಿ ಅವರ ಕುಟುಂಬ ಮತ್ತು ಮನೆ ಸಂಪೂರ್ಣವಾಗಿ ಬಡತನದಲ್ಲಿತ್ತು. ಸಚಿವರು ಜಗನ್ನಾಥ ಖಾರ್ವಿ ಮನೆ ದುರಸ್ತಿ ಮಾಡಬೇಕೆಂದು ಹೇಳಿದರು ಮತ್ತು ಅದಕ್ಕಾಗಿ ಹಣದ ಸಹಾಯ ಮಾಡುವುದಾಗಿಯೂ ಹೇಳಿದರು.ಅವರೊಂದಿಗೆ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಪೂಜಾರಿ, ಮಂಜುನಾಥ್ ಭಂಡಾರಿ ಮತ್ತು ಗಂಗೊಳ್ಳಿ ಪಂಚಾಯತ್
ಅಧ್ಯಕ್ಷರು ,ಸದಸ್ಯರು ಉಪಸ್ಥಿತರಿದ್ದರು.

error: No Copying!