Spread the love

ಕೋಟ: ದಿನಾಂಕ 19/07/2025 (ಹಾಯ್ ಉಡುಪಿ ನ್ಯೂಸ್) ಗರಿಕೆ ಮಠದ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಜನರನ್ನು  ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ  ಸುಧಾಪ್ರಭು ಅವರು ಬಂಧಿಸಿದ್ದಾರೆ.

ಕೋಟ ಪೊಲೀಸ್‌ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಸುಧಾ ಪ್ರಭು ಅವರು ದಿನಾಂಕ :18-07-2025 ರಂದು ಠಾಣೆಯಲ್ಲಿರುವಾಗ ಬ್ರಹ್ಮಾವರ ತಾಲೂಕು ಅಚ್ಲಾಡಿ ಗ್ರಾಮದ ಗರಿಕೆಮಠ ಎಂಬಲ್ಲಿಯ ಹಾಡಿಯಲ್ಲಿ ಅಂದರ್‌ ಬಾಹರ್‌ ಎಂಬ ಇಸ್ಪೀಟು ಆಟ ಆಡುತ್ತಿರುವುದಾಗಿ ಸಾರ್ವಜನಿಕ ಮಾಹಿತಿ ಬಂದ ಮೇರೆಗೆ ಕೂಡಲೇ ದಾಳಿ ನಡೆಸಿದ್ದಾರೆ .

ಆಗ ಸ್ಥಳದಲ್ಲಿ ಆಟ ಆಡುತ್ತಿದ್ದವರು ಓಡಿ ಹೋಗಿದ್ದು,ಅದರಲ್ಲಿ ಇಸ್ಪೀಟು ಆಡುತ್ತಿದ್ದ 1. ರಾಜು, 2.ರಮಾನಂದ, 3. ರಾಜು ,4.ಸಂತೋಷ, 5.ರಾಜೀವ, 6.ಕೃಷ್ಣ ಎಂಬವರನ್ನು ಬಂಧಿಸಿದ್ದಾರೆ. ಹಾಗೂ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ಒಟ್ಟು ನಗದು 15,450/, ಕಾರು-3,ಸ್ಕೂಟರ್‌ -2,ರೌಂಡ್‌ ಟೇಬಲ್‌ -1,ಪ್ಲಾಸ್ಟೀಕ್‌ ಚೇರ ಗಳು-6, ಇಸ್ಪೀಟ್‌ ಎಲೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!