
ಕೋಟ: ದಿನಾಂಕ :15-07-2025(ಹಾಯ್ ಉಡುಪಿ ನ್ಯೂಸ್) ಮಣೂರು ನಿವಾಸಿ ಭರತ್ ಎಂಬವರಿಗೆ ಮನೋಜ್ ಎಂಬವ ಬಿಯರ್ ಬಾಟಲಿಯಿಂದ ಗಂಭೀರ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪಡುಕೆರೆ, ಮಣೂರು ಗ್ರಾಮದ ನಿವಾಸಿ ಭರತ್ (24) ಎಂಬವರು ದಿನಾಂಕ:13.07.2025 ರಂದು ಸಂಜೆ ಕುಂದಾಪುರ ತಾಲೂಕು ತೆಕ್ಕಟ್ಟೆಯ ಗಣೇಶ ವೈನ್ ಶಾಪ್ ಬಳಿ ಇರುವಾಗ ಆರೋಪಿ ಮನೋಜನು ಅವಾಚ್ಯ ಶಬ್ದಗಳಿಂದ ಬೈದಿದ್ದು, ಯಾಕೆ ಬೈಯುತ್ತೀಯಾ ಎಂದು ಕೇಳಿದ್ದಕ್ಕೆ ಆರೋಪಿ ಏಕಾಏಕಿ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ತಲೆಗೆ ಬಲವಾಗಿ ಹೊಡೆದಿದ್ದು ಈ ಪರಿಣಾಮ ಭರತ ರವರ ತಲೆಯ ಎಡಬದಿ ಗಾಯವಾಗಿ ರಕ್ತ ಸುರಿದು ಪ್ರಜ್ಞೆ ತಪ್ಪಿ ಈ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ:118(1), 352 BNS ನಂತೆ ಪ್ರಕರಣ ದಾಖಲಾಗಿದೆ.