Spread the love

ಉಡುಪಿ: ದಿನಾಂಕ : 15/07/2025 (ಹಾಯ್ ಉಡುಪಿ ನ್ಯೂಸ್) ಗೋಪಾಲಪುರ ಬಸ್ ನಿಲ್ದಾಣದ ಬಳಿ ತಡರಾತ್ರಿ ಪೊಲೀಸರನ್ನು ಕಂಡು ಅವಿತು ಕುಳಿತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ  ಮಂಜುನಾಥ ವಿ ಬಡಿಗೇರ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಮಂಜುನಾಥ ವಿ ಬಡಿಗೇರ ಅವರು ರಾತ್ರಿ ಸೂಪರ್‌ ವೈಸಿಂಗ್ ರೌಂಡ್ಸ್‌ ಕರ್ತವ್ಯದಲ್ಲಿದ್ದು  ದಿನಾಂಕ 14/07/2025 ರಂದು ಸಂಚರಿಸುತ್ತಿರುವಾಗ ಮುಂಜಾನೆ 2:00 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಗೋಪಾಲಪುರ ಬಸ್‌ ನಿಲ್ದಾಣದ ಹತ್ತಿರದ ಕಟ್ಟಡದ ಬಳಿ ಮರೆಯಲ್ಲಿ ಓರ್ವ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದ ಮೇರೆಗೆ ಆತನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನು ಸಮರ್ಪಕವಾದ ಉತ್ತರ ನೀಡದೆ ಇದ್ದು, ಯಾವುದೋ ದುಷ್ಕೃತ್ಯ ನಡೆಸುವ ಸಂಶಯ ಬಂದಿರುವುದರಿಂದ ಆರೋಪಿ ಮಂಜುನಾಥ ಪೂಜಾರಿ (33) ಎಂಬಾತನನ್ನು ಬಂಧಿಸಿದ್ದಾರೆ.

ಆತನ ವಿರುದ್ದ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2025 ಕಲಂ: 96(B) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!