Spread the love

ಕುಂದಾಪುರ :ಮಾ19 (ಹಾಯ್ ಉಡುಪಿ ನ್ಯೂಸ್)) ಕೋಟೇಶ್ವರ ಗ್ರಾಮದ ಸರ್ವೇ ನಂಬರ್13-18p3 ಯಲ್ಲಿ 0.16 ಎಕ್ರೆ ಜಾಗವನ್ನು ಪುಟ್ಟು ಹೆಂಗ್ಸು, ಮುತ್ತು ಹೆಂಗ್ಸು ಹಾಗೂ ವೀರಮ್ಮ ಹೆಂಗ್ಸು ಎಂಬವರು ಪಿತ್ರಾರ್ಜಿತ ಆಸ್ತಿ ಯಾಗಿ ಹೊಂದಿದ್ದು ಇವರು ಮ್ರತರಾಗಿದ್ದು ಇವರಲ್ಲಿ ಮುತ್ತು ಹೆಂಗ್ಸು ರವರ ಮಗ ಕೂಸು ಪೂಜಾರಿ ಎಂಬವರು ಕೋಡಿ ನಾಗೇಶ್ ಕಾಮತ್,ಆನಂದ ಭಂಡಾರಿ,ಎಸ್.ಎಂ.ಘಣಿ ಬಸ್ರೂರು, ಅಸ್ಫಾಖ್ ಕೋಡಿ ಮತ್ತು ಶ್ವೇತಾ ಸಾಸ್ತಾನ ಎಂಬವರೊಂದಿಗೆ ಸೇರಿ ಕೊಂಡು ಆಸ್ತಿ ಲಪಟಾಯಿಸುವ ಉದ್ದೇಶದಿಂದ ಸುಳ್ಳು ಫೋರ್ಜರಿ ನಕಲಿ ಪವರ್ ಆಫ್ ಅಟಾರ್ನಿ ಮಾಡಿ ಕೊಂಡು ರಿಲೀಜ್ ಡೀಡ್ ದಸ್ತಾವೇಜು ಮಾಡಿಕೊಂಡಿದ್ದು ; ಖಾತಾ ಬದಲಾವಣೆ ವೇಳೆ ಗ್ರಾಮಕರಣಿಕರು ಈ ಮೊದಲೇ ತೀರಿಕೊಂಡಿರುವವರ ಫೋರ್ಜರಿ ಸಹಿಯ ಬಗ್ಗೆ ಸಂಶಯಗೊಂಡು ಖಾತಾ ಬದಲಾವಣೆ ತಡೆ ಹಿಡಿದು ತಹಶೀಲ್ದಾರ್ ರಿಗೆ ವರದಿ ಸಲ್ಲಿಸಿರುತ್ತಾರೆ.

ಈ ಬಗ್ಗೆ ಪುಟ್ಟು ಹೆಂಗ್ಸು ರವರ ಮಗ ಗಜೇಂದ್ರ ಪೂಜಾರಿ ಯವರಿಗೆ ನೋಟೀಸ್ ಬಂದಿದ್ದು ಫೋರ್ಜರಿ ಸಹಿ ಮಾಡಿ ದಾಖಲೆ ಸ್ರಷ್ಟಿ ಸಿರುವ ಬಗ್ಗೆ ಕೂಸು ಪೂಜಾರಿ ಹಾಗೂ ಇತರರ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!