Spread the love

೨೪ ನೇ ವರ್ಷದ ವಿಶ್ವಕರ್ಮ ಪೂಜೆ
ರಾಂಪುರ ಅಲೆವೂರು ವಿಶ್ವಕರ್ಮ ಸಮಾಜ ಸೇವಾ ರಿ. ಮತ್ತು ಶ್ರೀ ಕಾಳಿಕಾಂಬ ಮಹಿಳಾ ಮಂಡಳಿ ಇದರ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಪೂಜೆ, ಸಭಾಕಾರ್ಯಕ್ರಮ , ಪ್ರತಿಭಾ ಪುರಸ್ಕಾರ ಅನ್ನಸಂತರ್ಪಣೆ ಬಹಳ ವಿಜೃಂಭಣೆಯಿಂದ ಜರಗಿತು.
ವೇದಮೂರ್ತಿ ವಿಶ್ವನಾಥ ಪುರೋಹಿತರು ವಿಶ್ವಕರ್ಮ ಪೂಜೆ ನಡೆಸಿಕೊಟ್ಟರು. ತದನಂತರ ಸಭಾ ಕಾರ್ಯಕ್ರಮ ಜರಗಿತು ವೇದಿಕೆಯಲ್ಲಿ ಅತಿಥಿಗಳಾಗಿ
ಮಧು ಆಚಾರ್ಯ ಮುಲ್ಕಿ
ಅಧ್ಯಕ್ಷರು ವಿಶ್ವಕರ್ಮ ಒಕ್ಕೂಟ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ
ಪುಷ್ಪ ಅಂಚನ್ ಅಲೆವೂರು
ಅಧ್ಯಕ್ಷರು ಅಲೆವೂರು ಗ್ರಾಮ ಪಂಚಾಯತ್,
ಸುದರ್ಶನ್ ಆಚಾರ್ಯ ದೊಡ್ಡಣಗುಡ್ಡೆ ಉಡುಪಿ ರಥದ ಶಿಲ್ಪಿ ಮತ್ತು ಕಾಷ್ಠ ಶಿಲ್ಪಿ,
ಸಂಘದ ಅಧ್ಯಕ್ಷರಾದ ಸದಾನಂದ ಆಚಾರ್ಯ
ಮಹಿಳಾ ಮಂಡಳಿ ಅಧ್ಯಕ್ಷೆ ಸುವರ್ಣ ಆಚಾರ್ಯ ಉಪಸ್ಥಿತರಿದ್ದರು
ಕಾರ್ಯಕ್ರಮ ನಿರೂಪಣೆಯನ್ನು ಶ್ಯಾಮರಾಯ ಆಚಾರ್ಯರು ನಡೆಸಿಕೊಟ್ಟರು
ಸದಾಶಿವ ಆಚಾರ್ಯ ವಂದನಾರ್ಪಣೆ ಮಾಡಿದರು

error: No Copying!