Spread the love

ಹಿರಿಯಡ್ಕ:  ದಿನಾಂಕ:14-07-2025(ಹಾಯ್ ಉಡುಪಿ ನ್ಯೂಸ್) ಬೆಳ್ಳರಪಾಡಿ ಗ್ರಾಮದ ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಕಳ್ಳತನ ನಡೆಸಿದ್ದಾರೆ .

ಉಡುಪಿ ,ಬೆಳ್ಳರಪಾಡಿ ಗ್ರಾಮ ನಿವಾಸಿ ಪ್ರಸಾದ್ (40) ಎಂಬವರು ಆಟೋ ರಿಕ್ಷಾ ಚಾಲಕರಾಗಿದ್ದು, ದಿನಾಂಕ:13/07/2025 ರಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೋಗಿ ವಾಪಾಸು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಹೊರಗಿನ ಲೈಟ್‌ ಹಾಕಿ ಹೊರಗಡೆ ಹೋಗಿದ್ದು ವಾಪಾಸು ರಾತ್ರಿ  ಬಂದಾಗ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಮೋಟಾರ್‌ ಸೈಕಲ್‌ ನಿಂತಿದ್ದು, ಅನುಮಾನಗೊಂಡು ಮನೆ ಬಳಿ ಬಂದು ಅಂಗಳದಲ್ಲಿ ರಿಕ್ಷಾ ನಿಲ್ಲಿಸಿ ಇಳಿಯುತ್ತಿದ್ದಾಗ ಮನೆಯ ಒಳಗಿನಿಂದ ಯಾರೋ ಇಬ್ಬರು ವ್ಯಕ್ತಿಗಳು ಹೊರಗಡೆ ಓಡಿ ಬಂದು ಹಾಡಿಯ ಕಡೆಗೆ ಓಡಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಪ್ರಸಾದ್ ಅವರು ನೋಡಿದಾಗ ಮನೆಯ ಎದುರಿನ ಬಾಗಿಲಿನ ಬೀಗ ಹಾಗೂ ಚಿಲಕವನ್ನು ಮುರಿದು ಒಳಗೆ ಹೋಗಿ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಗಾಡ್ರೇಜ್‌ನ್ನು ಮುರಿದು ಅದರೊಳಗಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ಅದರಲ್ಲಿದ್ದ 8 ಗ್ರಾಂನ ಬಂಗಾರದ 2 ಜೊತೆ ಕಿವಿ ಓಲೆ,  2 ಗ್ರಾಂನ ಬಂಗಾರದ 2 ಉಂಗುರ ಮತ್ತು 1 ಜೊತೆ ಬೆಳ್ಳಿ ಕಾಲುಂಗುರ ಒಟ್ಟು ಸುಮಾರು ರೂ 63,500/- ಮೌಲ್ಯದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ   ಕಲಂ: 331(4), 305(a) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!