Spread the love

ಕಾರ್ಕಳ: ದಿನಾಂಕ 14/07/2025 (ಹಾಯ್ ಉಡುಪಿ ನ್ಯೂಸ್) ದುರ್ಗಾ ಗ್ರಾಮದ ಉಳಿರು ಗಣಪತಿ ವರ್ಗ ಎಂಬಲ್ಲಿ ಸ್ವರ್ಣಾ ನದಿಯಲ್ಲಿ  ಯಾರೋ ದನವನ್ನು ಹತ್ಯೆ ಮಾಡಿ ದನದ ತಲೆಯನ್ನು  ನದಿಗೆ ಎಸೆದಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ ತಾಲೂಕು, ದುರ್ಗಾ ಗ್ರಾಮದ ಬೆದ್ರ ಪಲ್ಕೆ ನಿವಾಸಿ  ಶಿವಪ್ರಸಾದ್ ಎಂಬವರಿಗೆ ದಿನಾಂಕ 13/07/2025 ರಂದು ಸಂಜೆ  ದುರ್ಗಾ ಗ್ರಾಮದ ಉಳಿರು ಗಣಪತಿ ವರ್ಗ ಎಂಬಲ್ಲಿ ಹರಿಯುತ್ತಿರುವ ಸ್ವರ್ಣ ಹೊಳೆ ಬದಿಯಲ್ಲಿ ಭಾಗಶಃ ಕೊಳೆತು ಹೋಗಿರುವ ದನದ ತಲೆಯಂತೆ ತೋರುವ ರುಂಡವೊಂದು ಹೊಳೆಯ ಬದಿ ಮರದ ತುಂಡಿಗೆ ಅಡ್ಡಲಾಗಿ ಸಿಕ್ಕಿಕೊಂಡಿರುತ್ತದೆ ಎಂಬುವುದಾಗಿ ಮಾಹಿತಿ ಬಂದಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕತ್ತಲೆಯಾಗಿದ್ದರಿಂದ ಮತ್ತು ವಿಪರೀತ ಮಳೆ ಬರುತ್ತಿದ್ದುದರಿಂದ, ಶಿವಪ್ರಸಾದ್ ರವರು ಮಾರನೇ  ದಿನ ದಿನಾಂಕ 14/07/2025 ರಂದು ಬೆಳಗ್ಗೆ  ದುರ್ಗಾ ಗ್ರಾಮದ ಉಳಿರು ಗಣಪತಿ ವರ್ಗ ಎಂಬಲ್ಲಿ ಹರಿಯುತ್ತಿರುವ ಸ್ವರ್ಣ ಹೊಳೆ ಬದಿಗೆ ಹೋಗಿ ನೋಡಿದಾಗ, ಅಲ್ಲಿ ಹೊಳೆಯ ಬದಿಯ ದಡದಲ್ಲಿ ಭಾಗಶಃ ಕೊಳೆತು ಹೋದ, ದನದ ತಲೆಯಂತೆ ಕಾಣುವ ರುಂಡವೊಂದು ಹೊಳೆಯಲ್ಲಿ ಕೊಚ್ಚಿಕೊಂಡು ಬಂದು, ಮರದ ತುಂಡಿಗೆ ಅಡ್ಡಲಾಗಿ ಸಿಕ್ಕಿಕೊಂಡಿದ್ದು, ಯಾರೋ ದುಷ್ಕರ್ಮಿಗಳು, ದನವನ್ನು ಕೆಲ ದಿನಗಳ ಹಿಂದೆ ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಅದನ್ನು ಹತ್ಯೆ ಮಾಡಿ, ಅದರ ಮಾಂಸವನ್ನು ತೆಗೆದು, ದನದ ತಲೆಯನ್ನು ಸ್ವರ್ಣ ಹೊಳೆಯ ನೀರಿಗೆ ಎಸೆದಿರುವ ಸಾಧ್ಯತೆ ಇದ್ದು, ಆ ರುಂಡವು ಹೊಳೆಯ ನೀರಿನಲ್ಲಿ ಕೊಚ್ಚಿಕೊಂಡು ಬಂದು ದುರ್ಗಾ ಗ್ರಾಮದ ಉಳಿರು ಗಣಪತಿ ವರ್ಗ ಎಂಬಲ್ಲಿ ಹೊಳೆಯ ದಡದಲ್ಲಿ ಮರದ ತುಂಡಿಗೆ ಅಡ್ಡಲಾಗಿ ಸಿಕ್ಕಿಕೊಂಡಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ 303(2)  BNS ಕಲಂ 4, 5, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ – 2020, ಕಲಂ: 11(1)(D) ಪ್ರಾಣಿ ಹಿಂಸೆ ತಡೆ ಕಾಯ್ದೆ ನಂತೆ ಪ್ರಕರಣ ದಾಖಲಾಗಿದೆ.

error: No Copying!