
ದಿನಾಂಕ:11-07-2025(ಹಾಯ್ ಉಡುಪಿ ನ್ಯೂಸ್)
ಮಾಯಮುಡಿ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ ಮೇರೆಗೆ ದಾಂಧಲೆ ನಿರತ ಕಾಡಾನೆಗಳ ಗುಂಪನ್ನು ಇಂದು ಅರಣ್ಯ ಇಲಾಖೆ ಸಿಬಂಧಿಗಳು ಕಾಡಿಗೆಟ್ಟಿದರು.
ಅನೇಕ ದಿನಗಳಿಂದ ಕೖಷಿ ಫಸಲು ನಷ್ಟ. ಪ್ರಾಣಭೀತಿಯುಂಟು ಮಾಡಿದ್ದ ದಾಳಿಕೋರ ಕಾಡಾನೆಗಳೂ ಕೊನೆಗೂ ಕಾಡಿಗೆ ಅಟ್ಟುವಲ್ಲಿ ಯಶಸ್ವೀ ಯಾಗಿದ್ದಾರೆ.
ನಿನ್ನೆಯಷ್ಟೇ ಶಾಸಕ ಪೊನ್ನಣ್ಣ ಅರಣ್ಯಾಧಿಕಾರಿಗಳು, ಎಲಿಫೆಂಟ್ ಟಾಸ್ಕ್ ಫೋಸ್೯ ತಂಡದ ಸಭೆ ನಡೆಸಿ ಕಾಡಾನೆಗಳ ದಾಂಧಲೆ ತಡೆಗಟ್ಟಿ, ಆನೆಗಳನ್ನು ಕಾಡಿಗೆ ಓಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದ ಬೆನ್ನಲ್ಲೇ ಇಂದು ಕಾಡಾನೆಗಳ 4 ಗುಂಪನ್ನು ಅರಣ್ಯದೊಳಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮಳೆಗಾಲದಲ್ಲಿ ಹಲಸು, ಬಿದಿರು, ಸೊಪ್ಪಿನಾಸೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ತೋಟಗಳಿಗೆ ಕಾಡಾನೆಗಳು ಬರುವ ಸಾಧ್ಯತೆ ಹಿನ್ನಲೆಯಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಇತ್ತೀಚಿಗೆ ಮಾಯಮೂಡಿ ಗ್ರಾಮಸ್ಥರು ಸಭೆ ಸೇರಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು. ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಕೂಡ ಅರಣ್ಯ ಅಧಿಕಾರಿಗಳ ಕಾರ್ಯವೈಕರಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.