
ಬ್ರಹ್ಮಾವರ: ದಿನಾಂಕ: 11.07.2025 (ಹಾಯ್ ಉಡುಪಿ ನ್ಯೂಸ್) ವಾರಂಬಳ್ಳಿ ಗ್ರಾಮದ ಕುಂಜಾಲ್ ಜಂಕ್ಷನ್ ಬಳಿಯ ಟೂರಿಸ್ಟ್ ಟೆಂಪೋ ಸ್ಟ್ಯಾಂಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ ಮಾಳಬಾಗಿ ಅವರು ಬಂಧಿಸಿದ್ದಾರೆ.
ವಾರಂಬಳ್ಳಿ ಗ್ರಾಮದ ಕುಂಜಾಲ್ ಜಂಕ್ಷನ್ ಬಳಿಯ ಟೂರಿಸ್ಟ್ ಟೆಂಪೋ ಸ್ಟ್ಯಾಂಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬ್ರಹ್ಮಾವರ ಪಿಎಸ್ಐ ಅಶೋಕ ಮಾಳಬಾಗಿ ಅವರಿಗೆ ಸಾರ್ವಜನಿಕ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಸ್ಥಳದಲ್ಲಿ KA-19-X-9055 ನೊಂದಣಿ ನಂಬ್ರದ ಸ್ಕೂಟರ್ ಮೇಲೆ ಮದ್ಯದ ಚೀಲವನ್ನು ಇಟ್ಟುಕೊಂಡು ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿತ ಉಮೇಶ(49) ಹಂದಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಎಂಬಾತನ್ನು ಹಿಡಿದು ಬಂಧಿಸಿ ವಿಚಾರಣೆ ನಡೆಸಿದಾಗ ಆತನು ಯಾವುದೇ ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದು ಅಲ್ಲದೇ ಮದ್ಯವನ್ನು ಬ್ರಹ್ಮಾವರದ Tonic Wines ನಿಂದ ಖರೀದಿಸಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.
ಆತನು ತಂದಿದ್ದ ಹಳೆಯ ಬಟ್ಟೆಯ ಚೀಲ-1 ಹಾಗೂ ಚೀಲದಲ್ಲಿದ್ದ ಬೇರೆ ಬೇರೆ ಬ್ರ್ಯಾಂಡ್ ನ ಒಟ್ಟು 30 ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ ಗಳು ಅದರ ಒಟ್ಟು ಅಂದಾಜು ಮೌಲ್ಯ ಸುಮಾರು ರೂ. 1,700/- ಹಾಗೂ ಆತನ ಬಳಿಯಿದ್ದ ಮಧ್ಯ ಮಾರಾಟದಿಂದ ಬಂದ ಹಣ ರೂ 280/- ಮತ್ತು ಮದ್ಯ ಮಾರಾಟ ಮಾಡಲು ಉಪಯೋಗಿಸಿದ KA-19-X-9055 ನೊಂದಣಿ ನಂಬ್ರದ ಸ್ಕೂಟರ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 32, 34 KE ACT ನಂತೆ ಪ್ರಕರಣ ದಾಖಲಾಗಿದೆ.