Spread the love

ಕಾಪು: ದಿನಾಂಕ : 07/07/2025 (ಹಾಯ್ ಉಡುಪಿ ನ್ಯೂಸ್) ದೆಂದೂರುಕಟ್ಟೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ  ವ್ಯಕ್ತಿ ಯನ್ನು ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ  ತೇಜಸ್ವಿ ಟಿ.ಐ ಅವರು ಬಂಧಿಸಿದ್ದಾರೆ.

ಕಾಪು ಪೊಲೀಸ್‌ ಠಾಣೆ ಪೊಲೀಸ್ ಉಪನಿರೀಕ್ಷಕರಾದ ತೇಜಸ್ವಿ ಟಿ ಐ ಅವರು ದಿನಾಂಕ:06-07-2025 ರಂದು  ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ‌ ಮಣಿಪುರ ಗ್ರಾಮದ, ದೆಂದೂರ್‌ ಕಟ್ಟೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಲವು ಜನ ಸೇರಿಕೊಂಡು ಕೋಳಿಗಳ ಕಾಲುಗಳಿಗೆ ಹಿಂಸಾತ್ಮಕವಾಗಿ ಬಾಳುಗಳನ್ನು ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿದೆ ಎನ್ನಲಾಗಿದೆ.

ಕೂಡಲೇ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಹಲವು ಜನ ಸೇರಿಕೊಂಡು ಕೋಳಿಗಳ ಮೇಲೆ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿದ್ದು  ಪೊಲೀಸರು ದಾಳಿ ನಡೆಸಿದಾಗ ಕೋಳಿ ಅಂಕ ನಡೆಸುತ್ತಿದ್ದ ವ್ಯಕ್ತಿಗಳು ಸ್ಥಳದಿಂದ ಓಡಿ ಹೋಗಿದ್ದು ಅವರುಗಳ ಪೈಕಿ ಓರ್ವನನ್ನು ಪೊಲೀಸರು ಹಿಡಿದುಕೊಂಡಿದ್ದು ವಿಚಾರಣೆ ನಡೆಸಿದಾಗ ಆತನ ಹೆಸರು ವಿಕಾಸ್‌ ಎಂಬುದಾಗಿ ತಿಳಿಸಿದ್ದು, ಸ್ಥಳದಲ್ಲಿ 3 ಕೋಳಿಗಳು, 2 ಕೋಳಿ ಬಾಳುಗಳು ಹಾಗೂ ಕೋಳಿ ಅಂಕದಿಂದ ಬಂದ ನಗದು ಹಣ ರೂಪಾಯಿ 350/-, ಸ್ಥಳದಲ್ಲಿ ಕೋಳಿಗಳ ರಕ್ತ ಹಾಗೂ ರೆಕ್ಕೆ-ಪುಕ್ಕಗಳು ಬಿದ್ದಿರುವುದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ  ಕಲಂ: 11 (1) (a) (n) Prevention of Cruelty to Animals Act. ಮತ್ತು 87 K P Act ರಂತೆ ಪ್ರಕರಣ ದಾಖಲಾಗಿದೆ.

error: No Copying!