Spread the love

ಕುಂದಾಪುರ: ದಿನಾಂಕ:07-07-2025(ಹಾಯ್ ಉಡುಪಿ ನ್ಯೂಸ್) ತಾನು ಡಾನ್ ಎಂಬಂತೆ ವರ್ತಿಸುತ್ತ ಯುವಕರು ಮಕ್ಕಳನ್ನು ಬೆದರಿಸುತ್ತಿದ್ದ ಯುವಕನೋರ್ವನಿಗೆ ವರ್ತನೆ ಸರಿಪಡಿಸಿ ಕೊಳ್ಳುವಂತೆ ಹೇಳಿದ ಯುವಕನಿಗೆ ಗಂಭೀರ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಸ್ರೂರು ಗ್ರಾಮದ ಕೋಳ್ಕೆರೆ ಜನತಾ ಕಾಲೋನಿಯ ಆದಿತ್ಯ ಎಂಬವನು ಕುಂದಾಪುರ,ಬಸ್ರೂರು ಗ್ರಾಮದ ಜೀವನ್ (24)  ಎಂಬವರ ತಮ್ಮ ಹಾಗೂ ಮಕ್ಕಳನ್ನು ಹೆದರಿಸಿ ಡಾನ್‌ ನಂತೆ ವರ್ತಿಸುತ್ತಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ರೀತಿ ವರ್ತನೆ ಮಾಡದಂತೆ ಜೀವನ್ ರವರ ತಮ್ಮ ಆದಿತ್ಯನಿಗೆ ತಿಳಿಸಿದ್ದು ಈ ವಿಚಾರವನ್ನು ಜೀವನರವರಲ್ಲಿ ತಿಳಿಸಿರುತ್ತಾರೆ ಎನ್ನಲಾಗಿದೆ. ಆ ಬಳಿಕ ಆಪಾದಿತ ಆದಿತ್ಯ ಜೀವನ್ ರವರಿಗೂ ಫೋನ್‌ ಮಾಡಿ ಬೆದರಿಕೆ ಹಾಕಿ ದಿನಾಂಕ 06/07/2025 ರಂದು ಸಂಜೆ  ಬಸ್ರೂರು ಗ್ರಾಮದ ಕೋಳ್ಕೆರೆ ಅಶ್ವತನ ಕಟ್ಟೆಯ ಬಳಿ ಬರುವಂತೆ ಹೇಳಿ ಆ ಸಮಯ ಜೀವನ್ ರವರು ಸ್ಥಳಕ್ಕೆ ಹೋದಾಗ ಆಗ ಸ್ಥಳದಲ್ಲಿ ಆದಿತ್ಯ ಮತ್ತು ಮನೀಷ್‌ ಎಂಬವನು ಇದ್ದಿದ್ದು ಆಪಾದಿತ ಮನೀಷ್‌ ಜೀವನ್ ರವರನ್ನು ಹಿಡಿದುಕೊಂಡು ಆದಿತ್ಯ  ಜೀವನ್ ರವರಿಗೆ ನಿಂದನೆ ಮಾಡಿ ಸಾರ್ವಜನಿಕ ರಸ್ತೆಯ ಮೇಲೆ ಕೈಯಿಂದ ಹೊಡೆದು, ಬೈಕ್‌ ಕೀ ತೆಗೆದುಕೊಂಡು ಪಂಚ್‌ ಮಾಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಆ ಸಮಯ ಕಾರಿನಲ್ಲಿ ಬಂದಂತಹ ಆಪಾದಿತ ರಾದ ರಾಕೇಶ್‌ , ನಂದ, ನಾಗ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ ರವರು ಆದಿತ್ಯ ಮತ್ತು ಮನೀಷ್‌ ಜೊತೆ ಸೇರಿ ಕೈಯಿಂದ, ಕೋಲಿನಿಂದ, ಕಲ್ಲಿನಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದಿರುತ್ತಾರೆ ಎನ್ನಲಾಗಿದೆ. ಹಲ್ಲೆಯಿಂದ ಜೀವನ್ ರವರಿಗೆ ಮೈ ಕೈ ಗೆ ತರಚಿದ ಗಾಯ ಹಾಗೂ ತುಟಿಗೆ, ಕೈ ಬೆರಳಿಗೆ  ಗಾಯ ಉಂಟಾಗಿ ರಕ್ತ ಬಂದಿದ್ದು, ತಲೆಗೆ, ಬೆನ್ನಿಗೆ ಒಳ ನೋವುಂಟಾಗಿರುತ್ತದೆ ಎಂದು ದೂರಿದ್ದಾರೆ.

ಆ ಸಮಯ ತಪ್ಪಿಸಲು ಬಂದ ರಾಜೀವ ಎಂಬುವವರಿಗೂ ಆದಿತ್ಯ ಕೈಯಿಂದ ಕೆನ್ನೆಗೆ ಹೊಡೆದು ದೂಡಿ ಹಾಕಿದ್ದು ಅಲ್ಲದೇ ರಸ್ತೆಯಲ್ಲಿ ಎಳೆದಿರುತ್ತಾರೆ ಇದರಿಂದ ರಾಜೀವ ರವರ ಕಾಲಿಗೆ, ಕೆನ್ನೆಗೆ ತರಚಿದ ಗಾಯವಾಗಿರುತ್ತದೆ ಎನ್ನಲಾಗಿದೆ .ಅಲ್ಲದೇ ಜೀವನ್ ರವರಿಗೆ ಆಪಾದಿತರು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಜೀವನ್ ರವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 115(2), 118(1), 352, 351(2) ಜೊತೆಗೆ 3(5) BNS ಮತ್ತು 3(1)(r)(s), 3(2)(va) SC/ST(POA) Act ರಂತೆ ಪ್ರಕರಣ ದಾಖಲಾಗಿದೆ.

error: No Copying!