ಉಡುಪಿ: ಮಾ17 ( ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಎಂ.ಐ.ಟಿ ಪ್ರೊಫೆಸರ್ ಓರ್ವರನ್ನು ಅಪರಿಚಿತರು ಆನ್ ಲೈನ್ ಬ್ಯಾಂಕಿಂಗ್ ಮೂಲಕ ವಂಚಿಸಿರುವ ಪ್ರಕರಣ ನಡೆದಿದೆ.
ಮಣಿಪಾಲ ಎಂ.ಐ.ಟಿಯ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ/ ವಾದಿರಾಜ ಭಟ್ ಜಿ.ಆರ್ ( 43 ) ಇವರಿಗೆ ಬ್ಯಾಂಕ್ ನ ಕೆ.ವ್ಯೆ.ಸಿ ಸರಿಪಡಿಸುವ ಬಗ್ಗೆ ಸಂದೇಶವೊಂದು ಬಂದಿದ್ದು ಡಾ/ ವಾದಿರಾಜರು ಸಂದೇಶವನ್ನು ಓಪನ್ ಮಾಡಿದಾಗ ಅವರ ಇಂಟರ್ನೆಟ್ ಬ್ಯಾಂಕಿಂಗ್ ನಿಂದ ಒಟ್ಟು 26,048 ರೂಪಾಯಿ ಹಣವನ್ನು ಯಾರೋ ಅಪರಿಚಿತ ವ್ಯಕ್ತಿ ಮೋಸದಿಂದ ಆನ್ಲೈನ್ ಮುಖಾಂತರ ವಂಚನೆ ಮಾಡಿ ನಷ್ಟ ಉಂಟು ಮಾಡಿರುತ್ತಾನೆ ಎಂದು ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.