Spread the love

ಕೋಟ:ಮಾ 17(ಹಾಯ್ ಉಡುಪಿ ನ್ಯೂಸ್) ಬ್ರಹ್ಮಾವರ ತಾಲೂಕು ಚಿತ್ರಪಾಡಿ ಗ್ರಾಮದ ಸುವರ್ಣ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಬಳಿ ನಿವಾಸಿ ಶ್ರೀಮತಿ ಸುಮಿತ್ರಾ ಉಪಾಧ್ಯ (64) ಎಂಬವರ ಕರಿಮಣಿ ಸರವನ್ನು ಯಾರೋ ಅಪರಿಚಿತರು ಸುಲಿಗೆ ಮಾಡಿರುವ ಪ್ರಕರಣ ನಡೆದಿದೆ.

ಸಂಬಂಧಿಕರ ಮನೆಯಲ್ಲಿನ ವೈಕುಂಠ ಸಮಾರಾಧನೆ ಕಾರ್ಯಕ್ರಮಕ್ಕೆಂದು ಹೋದವರು ಅಲ್ಲಿ ಊಟ ಮುಗಿಸಿ ಕೊಂಡು ತನ್ನ ಮನೆಗೆ ವಾಪಾಸು ನಡೆದುಕೊಂಡು ಬರುವಾಗ ಅವರನ್ನು ಬ್ಯೆಕಿನಲ್ಲಿ ಹಿಂಬಾಲಿಸಿ ಕೊಂಡು ಬಂದ ಯುವಕರಿಬ್ಬರು ಹಿಂದಿ ಭಾಷೆಯಲ್ಲಿ ಸುಮಿತ್ರಾ ಉಪಾಧ್ಯ ರ ಬಳಿ ಅಕ್ಕ ಪಕ್ಕದ ಜಾಗದ ಬಗ್ಗೆ ವಿಚಾರಿಸಿದ್ದಾರೆ.

ಸುಮಿತ್ರಾ ಉಪಾಧ್ಯ ರು ಮಾತನಾಡುತ್ತಿದ್ದಂತೆ ‌ಬೈಕಿನ ಹಿಂಬದಿ ಕುಳಿತವನು ಏಕಾಏಕಿ ಸುಮಿತ್ರಾ ಉಪಾಧ್ಯ ರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 1,25000 ರೂಪಾಯಿ ಮೌಲ್ಯ ದ ಕರಿಮಣಿ ಸರವನ್ನು ಎಳೆದುಕೊಂಡು ಬೈಕ್ ನಲ್ಲಿ ಬಂದಿದ್ದ ಇನ್ನೋರ್ವ ನೊಂದಿಗೆ ಪರಾರಿ ಯಾಗಿರುತ್ತಾನೆ ಎಂದು ಸುಮಿತ್ರಾ ಉಪಾಧ್ಯ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!