ಬ್ರಹ್ಮಾವರ: ಮಾ 17(ಹಾಯ್ ಉಡುಪಿ ನ್ಯೂಸ್) ತಾಲೂಕು ಕಚೇರಿ ಹಿಂಭಾಗದ ಆವರಣದಲ್ಲಿ ತಾಲೂಕು ಕಚೇರಿಗೆ ವಿದ್ಯುತ್ ಸರಬರಾಜು ಮಾಡಲು ಜನರೇಟರನ್ನು ಅಳವಡಿಸಲಾಗಿದ್ದು , ಕರೆಂಟ್ ಇಲ್ಲದಾಗ ಜನರೇಟರ್ ಚಾಲೂ ಮಾಡಲೆಂದು ಕಚೇರಿಯ ಸಿಬ್ಬಂದಿಗಳು ಜನರೇಟರ್ ಬಳಿ ತೆರಳಿದಾಗ ಜನರೇ ಟರ್ ಗೆ ಅಳವಡಿಸಿದ್ದ ರೂಪಾಯಿ 12000 ಮೌಲ್ಯದ ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಸಿಬ್ಬಂದಿ ಗಳ ಗಮನಕ್ಕೆ ಬಂದಿರುತ್ತದೆ.
ಈ ಬಗ್ಗೆ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾದ ರಾಜಶೇಖರ್ ಮೂರ್ತಿ ಯವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.