Spread the love

ಮಣಿಪಾಲ: ( ಹಾಯ್ ಉಡುಪಿ ನ್ಯೂಸ್) ಜಾಗದ ತಕರಾರಿನ ವಿಚಾರದಲ್ಲಿ ಅಣ್ಣ ತಮ್ಮಂದಿರು ಹೊಡೆದಾಡಿಕೊಂಡ ಘಟನೆ ಮೂಡು ಸಗ್ರಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿರುತ್ತದೆ.

ನೋಳೆ ಲಚ್ಚಿಲ್ ,ಮೂಡು ಸಗ್ರಿ, ಶಿವಳ್ಳಿ ನಿವಾಸಿ ಗಿರೀಶ್ ‌ಕುಮಾರ ನಾಯ್ಕ ಅವರ ಅಣ್ಣಂದಿರಾದ  ರಮೇಶ ಮತ್ತು ಗಣೇಶರವರು  ತಮ್ಮ ತಾಯಿಯ ಮನೆಯ ತೆಂಗಿನ ಕಾಯಿ ಕೊಯ್ಯುವ ವಿಚಾರದಲ್ಲಿ ಜಗಳವಾಡುತ್ತಿರುವುದನ್ನು ನೋಡಿ ಜಗಳ ನಿಲ್ಲಿಸಲು ಹೋದಾಗ ಜಗದೀಶ, ಗಣೇಶ , ಅಮ್ರತ, ಶ್ಯಾಮಲರವರು ಸೇರಿಕೊಂಡು ಕೋಲಿನಿಂದ ತಲೆಗೆ ಹೊಡೆದು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಗಿರೀಶ್ ‌ಕುಮಾರರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಜಗದೀಶ್ ರವರು ತಮಗೆ ಗಿರೀಶ್ ‌ಕುಮಾರರವರು ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ.

error: No Copying!