ಹೆಬ್ರಿ: (ಹಾಯ್ ಉಡುಪಿ ನ್ಯೂಸ್) ಮುದ್ರಾಡಿ ಗ್ರಾಮದ ಬಲ್ಲಾಡಿ ನಿವಾಸಿ ಪ್ರಮೋದಾ ಕುಲಾಲ್(42) ಎಂಬವರಿಗೆ ವಿನಾಕಾರಣ ಕತ್ತಿಯಿಂದ ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಈಶ್ವರ ನಗರ ಬಲ್ಲಾಡಿ ನಿವಾಸಿ ಪ್ರಮೋದಾ ಕುಲಾಲ್ ಎಂಬವರು ಹೆಬ್ರಿಯ ಬಲ್ಲಾಡಿ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಕೊಂಡಿದ್ದು ಅವರ ಪರಿಚಯದ ಬಲರಾಮ ಎಂಬವರು ಯಾವುದೋ ವಿಚಾರದಲ್ಲಿ ಕೋಪಗೊಂಡು ದಿನಾಂಕ 14-03-2022 ರಂದು ಮಧ್ಯಾಹ್ನ 1-00 ಘಂಟೆಗೆ ಈಶ್ವರ ನಗರ ಬಲ್ಲಾಡಿ ಎಂಬಲ್ಲಿರುವ ಮನೆಗೆ ಪ್ರಮೋದಾ ಕುಲಾಲ್ ರವರು ಮನೆಯ ಹತ್ತಿರದ ರಸ್ತೆಯಲ್ಲಿ ಊಟಕ್ಕೆ ನಡೆದುಕೊಂಡು ಬರುತ್ತಿರುವಾಗ ಅವರನ್ನು ಆಪಾದಿತ ಬಲರಾಮ ಅಡ್ಡ ಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈ ಯಿಂದ ಎಳೆದು ಆತನ ಇನ್ನೊಂದು ಕೈ ಯಲ್ಲಿದ್ದ ಕತ್ತಿಯಿಂದ ಪ್ರಮೋದಾ ರವರನ್ನು ಕೊಲ್ಲುವ ಉದ್ದೇಶದಿಂದ ಕುತ್ತಿಗೆಯ ಬಳಿ ಕಡಿದ ಪರಿಣಾಮ ತೀವ್ರ ಸ್ವರೂಪದ ಗಾಯವಾಗಿದ್ದು ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.