
ದಿನಾಂಕ:21-06-2025(ಹಾಯ್ ಉಡುಪಿ ನ್ಯೂಸ್)
ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಹಿನ್ನಡೆ ಅನುಭವಿಸಿದ ಭಾರತ 471 ರನ್‌ಗಳಿಗೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಮೊದಲ ಇನ್ನಿಂಗ್ಸ್ ಮುಗಿಸಿದೆ.
ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಾಯಕ ಶುಭಮನ್ ಗಿಲ್ ಸೇರಿದಂತೆ ತಂಡದ ಮೂವರು ಆಟಗಾರರು ಶತಕದ ನೆರವಿನಿಂದ 471ಕ್ಕೆ ಆಲೌಟ್ ಆಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತ್ತು. ಇಂದು 112 ರನ್ ಮಾತ್ರ ಗಳಿಸಿ ಸರ್ವ ಪತನ ಕಂಡಿತು. ರಿಷಭ್ ಪಂತ್ ಶತಕ ಸಿಡಿಸಿದರೂ, ಉಳಿದವರ ಪ್ರದರ್ಶನ ನಿರಾಸೆ ಮೂಡಿಸಿತು.