Spread the love

ದಿನಾಂಕ:21-06-2025(ಹಾಯ್ ಉಡುಪಿ ನ್ಯೂಸ್)

ಬಾರ್ಕೂರು : ದಿನಾಂಕ 21/06/2025 ರಂದು ಸ.ಹಿ.ಪ್ರಾ.ಶಾಲೆ ಹೊಸಾಳ,ಬಾರ್ಕೂರು ಇಲ್ಲಿಯ ವಿದ್ಯಾರ್ಥಿಗಳಿಗೆ ಪೂರ್ತಿ ವರ್ಷಕ್ಕಾಗುವಷ್ಟು ನೋಟ್‌ಪುಸ್ತಕ ದಾನಿಗಳಾದ ಕಿರಣ್ ಪೂಜಾರಿ , ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಸಂಘ (ರಿ.), ಉಡುಪಿ ಜಿಲ್ಲಾ ಅಧ್ಯಕ್ಷರು., ಪ್ರವೀಣ ನಾಗರಮಠ ಗ್ರಾ.ಪಂ. ಸದಸ್ಯರು ಬಾರ್ಕೂರು, ಜಯಶಂಕರ್ ಪೂಜಾರಿ ಕೂಡ್ಲಿ. ಶಂಕರಾಚಾರ್ಯ ದತ್ತಿ ನಿಧಿಯ ಕಲಿಕೋಪಕರಣ ಪ್ರಾಯೋಜಕರು ಶ್ರೀ ಗಣೇಶ ಆಚಾರ್ಯ ಹಸ್ತಾಂತರ ಮಾಡಿದರು.

ಎಸ್ .ಡಿ .ಎಮ್ .ಸಿ ಅಧ್ಯಕ್ಷ ಮಂಜುನಾಥ ಆಚಾರ್ಯ, ಉಪಾಧ್ಯಕ್ಷೆ ಉಷಾ, ಪಂಚಾಯಿತಿಯ ಸದಸ್ಯರಾದ ಅಶ್ವಿನಿ, ಹಳೆವಿದ್ಯಾರ್ಥಿಸಂಘದ ಶ್ರೀನಿವಾಸ ನಾಗರಮಠ, ಪೋಷಕರು, ಎಸ್ ಡಿ ಎಮ್ ಸಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶ್ಯಾಮ ಸುಂದರ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿಯರಾದ ಪಾರ್ವತಿ, ಕಲಾವತಿ, ಸೌಮ್ಯ ಸಹಕರಿಸಿದರು, ಗೀತಾ ಎನ್ ವಂದಿಸಿದರು. ದಾನಿಗಳನ್ನು ಗೌರವಿಸಲಾಯಿತು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

error: No Copying!