
ಉಡುಪಿ: ದಿನಾಂಕ :21-06-2025(ಹಾಯ್ ಉಡುಪಿ ನ್ಯೂಸ್) ವಿದ್ಯಾರ್ಥಿಯೋರ್ವನಿಗೆ ನೀಟ್ ಪರೀಕ್ಷೆಯ ನಕಲಿ ಅಂಕಪಟ್ಟಿ ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚನೆ ನಡೆಸಿದ್ದಾರೆಂದು ನೊಂದ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ರೋಷನ್ ಎಂಬವರ ಮಗ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು NTA ದಿಂದ ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯನ್ನ ಬರೆದಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ರೋಷನ್ ರವರ ಮಗ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ Editing Master (@EDITINGMASTER-d6r) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ how to digitally alter and fake exam results for national-level exams such as NEET, JEE, and CBSE ಎಂಬ ವಿಡಿಯೋಗಳು ಇದ್ದು, ಯೂಟ್ಯೂಬ್ ಚಾನೆಲ್ ನಲ್ಲಿ ಎರೆಡು ಮೊಬೈಲ್ ನಂಬ್ರ ನೀಡಲಾಗಿದ್ದು, ರೋಷನ್ ರವರ ಮಗ ವಾಟ್ಸಾಪ್ ಮೂಲಕ ಅವರನ್ನು ಸಂಪರ್ಕಿಸಿದ್ದು ಅವರು ತಮ್ಮನ್ನು ವಿಷ್ಣು ಕುಮಾರ್ ತಂದೆ: ಸಂಜೀವ್ ಕುಮಾರ್ ಎಂದು ಪರಿಚಯಿಸಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರದಲ್ಲಿ ರೋಷನ್ ರವರ ಮಗನಿಗೆ ನಕಲಿ ನೀಟ್ ಅಂಕ ಪಟ್ಟಿ ಹಾಗೂ ಓಎಂಆರ್ ನೀಡುವುದಾಗಿ ತಿಳಿಸಿ ಒಟ್ಟು 17,000/- ರೂಪಾಯಿ ವರ್ಗಾಯಿಸಿಕೊಂಡು ಡಿಜಿಟಲ್ ಆಗಿ ನೀಟ್ ಪರೀಕ್ಷೆಯ ನಕಲಿ ಅಂಕ ಪಟ್ಟಿ ಹಾಗೂ ಓಎಂಆರ್ ಶೀಟ್ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿರುತ್ತಾರೆ ಎಂದಿದ್ದಾರೆ .
ನಕಲೀ ದಾಖಲೆಗಳನ್ನು ಸೃಷ್ಟಿಸಿ ರೋಷನ್ ರವರ ಮಗನಿಗೆ ವಂಚಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66 (C), 66(D)IT Act. ಮತ್ತು ಕಲಂ 335,336(2), 336(3), 318(4) BNS ರಂತೆ ಪ್ರಕರಣ ದಾಖಲಾಗಿದೆ.