ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ೧೨ನೇ ದಿನ ಮುಂದುವರಿದಿದೆ. ಈ ಮಧ್ಯೆ, ರಷ್ಯಾ ಉಕ್ರೇನ್‌ನಾದ್ಯಂತ ಕದನ ವಿರಾಮವನ್ನು ಘೋಷಿಸಿದೆ. ಈ ಕದನ ವಿರಾಮವು ೧೨.೩೦ಕ್ಕೆ ಆರಂಭಗೊAಡಿದೆ. ಈ ಸಂದರ್ಭದಲ್ಲಿ, ಯುದ್ಧದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್ ನಿರ್ಮಿಸಲಾಗುತ್ತದೆ. ಉಕ್ರೇನ್‌ನಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದ್ದು ಇದು ಎರಡನೇ ಬಾರಿ. ಈ ಹಿಂದೆ ಎರಡು ನಗರಗಳಲ್ಲಿ ಕದನ ವಿರಾಮ ಮಾಡಲಾಗಿತ್ತು. ಆದರೆ ರಷ್ಯಾ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಬಾಂಬ್ ದಾಳಿಯನ್ನು ಆರಂಭಿಸಿತ್ತು. ಇಂದು ಮುಂಜಾನೆ, ಉಕ್ರೇನ್ ನಗರದ ಖಾರ್ಕಿವ್‌ನಲ್ಲಿನ ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ಮಾಡಲು ನಿರ್ಧರಿಸಿತ್ತು. ಆದರೆ, ಸೀಜ್ ಫಾಯರ್ ಘೋಷಣೆ ಮಾಡಿದ್ದರಿಂದ ಬಂಕರ್‌ಗಳು ಸೇರಿದಂತೆ ಸುರಕ್ಷಿತ ಸ್ಥಳಗಳಿಗೆ ಹೋಗಲು ಈಗಾಗಲೇ ಜನರಿಗೆ ಸೂಚಿಸಲಾಗಿದೆ. ಆದರೂ ಸಹ ಇನ್ನು ಕೆಲವರು ಅಲ್ಲಿ ಸಿಲುಕಿರುವ ಶಂಕೆ ಇದೆ. ಈ ಮಧ್ಯೆ, ಉಕ್ರೇನ್ ಸೇನೆ ಅನೇಕ ರಷ್ಯಾದ ಟ್ಯಾಂಕ್ ಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ. ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರ ಕೋರಿಕೆಯ ಮೇರೆಗೆ ಕೈವ್, ಮಾರಿಯುಪೋಲ್, ಖಾರ್ಕಿವ್ ಮತ್ತು ಸುಮಿಯಿಂದ ಮಾನವೀಯ ಕಾರಿಡಾರ್‌ಗಳನ್ನು ತೆರೆಯಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.