Spread the love

ಉಡುಪಿ: ದಿನಾಂಕ:19-06-2025(ಹಾಯ್ ಉಡುಪಿ ನ್ಯೂಸ್)

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ ಕೋಟಿ ಗೀತೆ ಲೇಖನ ಯಜ್ಞದಲ್ಲಿ ಪಾಲ್ಗೊಂಡು ಸಂಪೂರ್ಣ ಭಗ್ಗವದ್ಗೀತೆಯನ್ನು ಕೇವಲ 5.30 ಘಂಟೆಗಳಲ್ಲಿ ಮುಗಿಸಿ ವಿಶ್ವ ದಾಖಲೆ ರಚಿಸಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ ದಾಖಲೆ ಮಾಡಿರುವ ಉಡುಪಿ ನಗರ ಬಿಜೆಪಿ ಒ.ಬಿ.ಸಿ ಮೋರ್ಚಾದ ಉಪಾಧ್ಯಕ್ಷರಾದ ಸುಶಾಂತ್ ಬ್ರಹ್ಮಾವರ ಹಾಗೂ ಇವರ ಧರ್ಮಪತ್ನಿ ಶ್ರೀಮತಿ ಸಂಜನಾ ಇವರಿಂದ ಶ್ರೀಕೃಷ್ಣಮಠದಲ್ಲಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳಿಗೆ ಅರ್ಪಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಒ.ಬಿ.ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯ ಕೊಡವೂರು, ಉಡುಪಿ ನಗರ ಒ.ಬಿ.ಸಿ ಮೋರ್ಚಾದ ಅಧ್ಯಕ್ಷರಾದ ಲಕ್ಷ್ಮೀಶ್ ಬಂಗೇರ ಮಲ್ಪೆ, ಬಿ.ಜೆ.ಪಿ ಮುಖಂಡರಾದ ಮಧುಕರ್ ಮುದ್ರಾಡಿ, ಎ.ಪಿ.ಎಂ.ಸಿ ಅಧ್ಯಕ್ಷರಾದ ಸುಭಾಷಿತ್ ಕುಮಾರ್ ಹಾಗೂ ಶಬರಿಮಲೆ ಅಯ್ಯಪ್ಪ ಸಂಘದ ಜಿಲ್ಲಾಧ್ಯಕ್ಷರಾದ ರಾಧಕೃಷ್ಣ ಮೆಂಡನ್ ಮತ್ತು ಉಡುಪಿ ನಗರ ಒ.ಬಿ.ಸಿ ಮೋರ್ಚಾದ ಕಾರ್ಯದರ್ಶಿಯಾದ ಭರತ್ ಕಾಡುಬೆಟ್ಟು ಇವರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

error: No Copying!