
ಉಡುಪಿ: ದಿನಾಂಕ:19-06-2025 (ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಅವರು ವರ್ಗಾವಣೆ ಆಗಿ ತಿಂಗಳು ಆಗುವುದರೊಳಗೆ ಉಡುಪಿ ನಗರ ಠಾಣೆಯ ಪೊಲೀಸರು ತಮ್ಮ ಕರ್ತವ್ಯ ವನ್ನೇ ಮರೆತಂತಿದೆ.
ಕೆಲವೇ ದಿನಗಳ ಹಿಂದೆ ನಮ್ಮ ಮಾಧ್ಯಮ ಉಡುಪಿ ಸಿಟಿ ಬಸ್ ನಿಲ್ದಾಣದ ಐರೋಡಿ ಸರ್ಕಲ್ ಬಳಿ ವೇಶ್ಯಾವಾಟಿಕೆಗೆ ಬೆರಳೆಣಿಕೆಯ ವೇಶ್ಯಾವಾಟಿಕೆ ವ್ರತ್ತಿ ಪರರು ಸಾರ್ವಜನಿಕವಾಗಿ ಚಾಲನೆ ನೀಡಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕರು ದೂರಿಕೊಂಡಿರುವುದನ್ನು ವರದಿ ಮಾಡಿ ಪೊಲೀಸ್ ಇಲಾಖೆಯನ್ನು ಹಾಗೂ ನೂತನ ಪೊಲೀಸ್ ವರಿಷ್ಠಾಧಿಕಾರಿ ಯವರನ್ನು ಎಚ್ಚರಿಸಿತ್ತು.
ಆದರೆ ಪೊಲೀಸ್ ಇಲಾಖೆ ಗಾಢ ನಿದ್ರೆ ಗೆ ಜಾರಿ ಕೊಂಡಿದೆ ಎಂದು ತಿಳಿದು ಕೊಂಡ ವೇಶ್ಯಾವಾಟಿಕೆ ದಂಧೆ ಕೋರರು ಕಾನೂನು ಸುವ್ಯವಸ್ಥೆ ಎಕ್ಕುಟ್ಟಿ ಹೋಗಿದೆ ಎಂದು ಅರ್ಥೈಸಿ ಕೊಂಡಿದ್ದಾರೆ. ಇದೀಗ ಸಿಟಿ ಬಸ್ ನಿಲ್ದಾಣದ ಐರೋಡಿ ಸರ್ಕಲ್ ನಲ್ಲಿ ರಾತ್ರಿ ಹೊತ್ತು ಅರೆ ನಗ್ನ ವೇಶ್ಯೆ ಯರ ತಂಡವೇ ಬಂದು ದಂಧೆಗೆ ಇಳಿದು ಕೊಂಡು ನಗ್ನ ಪ್ರದರ್ಶನ ಮಾಡುತ್ತಾ ಸಾರ್ವಜನಿಕ ರನ್ನು ತಲೆ ತಗ್ಗಿಸಿ ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ಸಾಗಲಿ ಎಂದು ಉಡುಪಿ ನಗರ ಸಭೆಯು ಕೂಡ ಇಲ್ಲಿ ಬೀದಿ ದೀಪ ಅಳವಡಿಸದೆ ಕತ್ತಲೆ ನಿರ್ಮಾಣ ಮಾಡಿ ವೇಶ್ಯಾವಾಟಿಕೆ ನಿರಂತರವಾಗಿ ನಡೆಯಲಿ ಎಂದು!ಉಡುಪಿ ನಗರದ ಮಾನ ಹರಾಜಿಗೆ ತನ್ನ ಸಹಕಾರವನ್ನೂ ನೀಡಿದೆ. ಇದೆಲ್ಲವನ್ನು ಸಾರ್ವಜನಿಕರು ನೋಡ ಬೇಕಾದರೆ ಸಾರ್ವಜನಿಕರು ರಾತ್ರಿ ಹತ್ತು ಘಂಟೆಯ ನಂತರ ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಐರೋಡಿ ಸರ್ಕಲ್ ಗೆ ಬನ್ನಿ.
ಉಡುಪಿ ಜಿಲ್ಲೆಯ ಉಡುಪಿ ನಗರದಲ್ಲೇ ಈ ರೀತಿಯ ಕಾನೂನು ಸುವ್ಯವಸ್ಥೆ ಆದರೆ ಇನ್ನು ಉಡುಪಿ ಜಿಲ್ಲೆಯನ್ನು ಕಾಪಾಡುವವರು ಯಾರು ಎಂಬುದೇ ಯಕ್ಷಪ್ರಶ್ನೆ ಯಾಗಿದೆ.
ನೂತನ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಕಚೇರಿ ಯಿಂದ ಹೊರ ಬಂದು ರಾತ್ರಿ ರೌಂಡ್ಸ್ ನಡೆಸಿ ಇಂತಹ ಮಾನಗೆಟ್ಟ ವರ್ತನೆಗಳಿಗೆ ಕಡಿವಾಣ ಹಾಕುವ ಮೂಲಕ ಶ್ರೀ ಕೃಷ್ಣ ನ ನಗರಿ ಉಡುಪಿಯ ಮಾನ ಕಾಪಾಡುವರೇ?