
ಉಡುಪಿ: ದಿನಾಂಕ:19-06-2025(ಹಾಯ್ ಉಡುಪಿ ನ್ಯೂಸ್) ನ್ಯಾಯಾಲಯದ ಆವರಣದಲ್ಲಿರುವ ಅಂಗಡಿಯೊಂದಕ್ಕೆ ವ್ಯಕ್ತಿ ಯೋರ್ವ ಕಲ್ಲು ಎಸೆದು ಅಂಗಡಿ ಮಾಲೀಕರಿಗೆ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ಕೋರ್ಟ್ ಹಿಂಬದಿ ರಸ್ತೆ ನಿವಾಸಿ ಶೇಖರ್ (48) ಎಂಬವರು ಉಡುಪಿ ನ್ಯಾಯಾಲಯದ ಆವರಣದಲ್ಲಿ ಸುಪ್ರೀತಾ ಎಂಟರ್ ಪ್ರೈಸೆಸ್ ಎಂಬ ಟೈಪಿಂಗ್ ಸೆಂಟರ್ ಅಂಗಡಿಯನ್ನು ನಡೆಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 18/06/2025 ರಂದು ಸಂಜೆ ಅಂಗಡಿಯಿಂದ ಮನೆಗೆ ಹೋಗಲು ಸಿದ್ದವಾಗುತ್ತಿರುವಾಗ ಮಂಚಿ ನಿವಾಸಿ ಸಂತೋಷ ಎಂಬಾತ ಏಕಾಏಕಿಯಾಗಿ ಅಂಗಡಿಗೆ ಕಲ್ಲು ಎಸೆದು ಅಂಗಡಿ ಒಳಗೆ ನುಗ್ಗಿ ಶೇಖರ್ ರವರ ಮೇಲೆ ಕಲ್ಲು ಎಸೆದು ತಲೆಯ ಮೇಲೆ ಕಲ್ಲು ಹೊತ್ತು ಹಾಕಿ ಸಾಯಿಸುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿದ್ದಾರೆ. ಶೇಖರ್ ರವರಿಗೆ ಆರೋಪಿ ಕಲ್ಲು ಹೊಡೆದು ಮುಖಕ್ಕೆ ,ಕಣ್ಣಿಗೆ ಪರಚಿ ಗಾಯ ಮಾಡಿದ್ದು ಶೇಖರ್ ರವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
ಈ ಹಿಂದೆಯೂ ಆರೋಪಿ ಸಂತೋಷ 3 ಬಾರಿ ಶೇಖರ್ ರವರ ಪಕ್ಕದ ಅಂಗಡಿಗೆ ಕಲ್ಲು ಹೊಡೆದಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ:118(1),324(3),351 BNS ರಂತೆ ಪ್ರಕರಣ ದಾಖಲಾಗಿದೆ.