Spread the love

ಕೋಟ: ದಿನಾಂಕ :18-06-2025(ಹಾಯ್ ಉಡುಪಿ ನ್ಯೂಸ್) ಹುಬ್ಬಳ್ಳಿಯಲ್ಲಿ ಪಾಲುದಾರಿಕೆಯಲ್ಲಿ  ಬ್ಯೂಟೆಕ್ ಡಿಸೈನ್ ಸ್ಟುಡಿಯೋ ನಡೆಸುವಂತೆ ನಂಬಿಸಿ ಸಾಸ್ತಾನದ ಯುವತಿಯೋರ್ವರಿಗೆ 6.5ಲಕ್ಷ ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಸ್ತಾನ ನಿವಾಸಿ ಅಶ್ವಿನಿ (29)  ಎಂಬವರು ಸಾಸ್ತಾನದಲ್ಲಿ ಬ್ಯುಟಿಕ್‌ ಡಿಸೈನರ್‌ ವೃತ್ತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.2024 ಜನವರಿಯಲ್ಲಿ ಅವರ ದೂರದ ಸಂಬಂಧಿ ರಂಜಿತ್‌ ಕುಮಾರ್‌ ಎಂಬಾತನ ಪರಿಚಯವಾಗಿರುತ್ತದೆ ಎಂದಿದ್ದಾರೆ .ಆತನು ಅಶ್ವಿನಿ ರವರಿಗೆ ಪಾಲುದಾರಿಕೆಯಲ್ಲಿ ಹುಬ್ಬಳ್ಳಿಯಲ್ಲಿ ಬ್ಯುಟಿಕ್‌ ಡಿಸೈನರ್‌ ಸ್ಟುಡಿಯೋ ಮಾಡುವ ಎಂದು ನಂಬಿಸಿ ಬಾಡಿಗೆಗೆ ಕಟ್ಟಡವನ್ನು ತೋರಿಸಿ ಅಶ್ವಿನಿ ರವರಿಂದ ಹಂತ ಹಂತವಾಗಿ 1,96,740/- ಹಣವನ್ನು ಆರೋಪಿ 1 ನೇ ಯವ ರಂಜಿತ್‌ನ ಅಕೌಂಟ್‌ ನಂಬರ್‌ ಗೆ ಹಾಕುವಂತೆ ಮಾಡಿ ನಂತರ ಆತನ ಅಕೌಂಟ್‌ ಸಮಸ್ಯೆ ಆಗಿದೆ ಎಂದು ತಿಳಿಸಿ ಆರೋಪಿ 2 ನೇಯವನಾದ ಅವನ ತಾಯಿ ಶಾರದ ರ ಅಕೌಂಟ್‌ ಗೆ ಹಂತ ಹಂತವಾಗಿ 4,33,250/- ರೂಪಾಯಿಗಳನ್ನು ಹಾಕುವಂತೆ ಮಾಡಿ ಒಟ್ಟು 6,29,990/- ಹಣವನ್ನು ಆರೋಪಿಗಳು ಇಬ್ಬರೂ ಸೇರಿ ಅಶ್ವಿನಿ ರವರಿಗೆ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ .

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ:117/2025 US 318(2), 318(3), 318(4), 61(2) RW 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!