
ಉದ್ಯಾವರ: ದಿನಾಂಕ : 06-06-2025(ಹಾಯ್ ಉಡುಪಿ ನ್ಯೂಸ್)ಉದ್ಯಾವರರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಘಟನೆ ಶುಕ್ರವಾರ ಮುಂಜಾನೆ ಉದ್ಯಾವರ ಕಿಯಾ ಶೋರೂಮ್ ಎದುರು ಘಟಿಸಿದೆ.
ಮಂಗಳೂರಿನಿಂದ ಹರ್ಯಾಣದತ್ತ ತೆರಳುತ್ತಿದ್ದ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಮೇಲೇರಿ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಕಾರು ಡಿವೈಡರ್ ಏರಿದ್ದ ಪರಿಣಾಮ ಹೆದ್ದಾರಿಯ ಕ್ರಾಶ್ ಗಾರ್ಡ್ ಸಹಿತ ಕಾರಿನ ಮುಂಬಾಗ ಸಂಪೂರ್ಣ ನಜ್ಜು ಗುಜ್ಜಾಗಿ ಹಾನಿ ಸಂಭವಿಸಿದೆ. ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.