
ಉಡುಪಿ: ದಿನಾಂಕ 06/06/2025 (ಹಾಯ್ ಉಡುಪಿ ನ್ಯೂಸ್) ಕ್ರಿಕೆಟ್ ಬೆಟ್ಟಿಂಗ್ ವೆಬ್ ಸೈಟ್ ಮೂಲಕ ಐಪಿಲ್ ಫೈನಲ್ ಪಂದ್ಯದ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಒಳಕಾಡು ನಿವಾಸಿ ದಂಪತಿಗಳನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರು ಬಂಧಿಸಿದ್ದಾರೆ.
ಸೆನ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ರಿಗೆ ದಿನಾಂಕ:03-06-2025 ರಂದು ಶಿವಳ್ಳಿ ಗ್ರಾಮದ ಪಿ.ಪಿ.ಸಿ ಕಾಲೇಜು ಬಳಿ ಇರುವ ಶಕ್ತಿಶೀ ಎಂಬಲ್ಲಿ ಎಂ. ರಾವ್ ಎಂಬುವವರ ಬಾಡಿಗೆ ಮನೆಯಲ್ಲಿ LORDSEXCH ಎಂಬ ಕ್ರಿಕೆಟ್ ಬೆಟ್ಟಿಂಗ್ ವೈಬ್ ಸೈಟ್ ಮುಖಾಂತರ ತನ್ನಲ್ಲಿರುವ Oppo Campany F27 Pro Plus 5G ಫೋನ್ ಮೂಲಕ ಅಹಮದಾಬಾದ್ ನಲ್ಲಿ ನರೇಂದ್ರಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ PBKS (ಪಂಜಾಬ್ ಕಿಂಗ್ಸ್ ) RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್ ಮ್ಯಾಚ್ಗೆ ಸಂಬಂಧಪಟ್ಟು, ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದ್ದು ಕೂಡಲೇ ಸ್ಥಳಕ್ಕೆ ಸಿಬ್ಬಂದಿ ಗಳೊಂದಿಗೆ ಹೋಗಿದ್ದಾರೆ .
ಸ್ಥಳದಲ್ಲಿ ಅನಂತ ಪಿ ಎಂಬಾತ ಆಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡವನ್ನು ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಹಾಗೂ ಆತನು ಸಿದ್ದಾರ್ಥ ಎಂಟರ್ ಪ್ರೈಸಸ್ ಎಂಬವರಿಂದ ಪಡೆದ LORDSEXCH ಎಂಬ ವೆಬ್ ಸೈಟ್ ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಆಡಲು ಯೂಸರ್ ಐಡಿ ಹಾಗೂ ಪಾಸ್ವರ್ಡ್ ಪಡೆದು ನಂತರ ಪಾಸ್ ವರ್ಡ್ ನ್ನು ತನಗೆ ಬೇಕಾದಂತೆ ಬದಲಾಯಿಸಿಕೊಂಡು ವಾಟ್ಸ್ಪ್ ಚಾಟ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣವನ್ನು ನೀಡುವ ಒಪ್ಪಿಗೆಯ ಮೇರೆಗೆ ಪಂಥವನ್ನು ಸ್ವೀಕರಿಸಿದ್ದು, ಅದನ್ನು ಸಿದ್ದಾರ್ಥ ಎಂಟರ್ ಪ್ರೈಸಿಸ್ ಎಂಬ ಸಂಸ್ಥೆಯ ಬ್ಯಾಂಕ್ ಖಾತೆ ಹಾಗೂ ಪೋನ್ ಪೇ ಮೂಲಕ ಹಣವನ್ನು ಪಣವಾಗಿಟ್ಟುಕೊಂಡಿದ್ದು, ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರವನ್ನು ಮಾಡಲು ತನ್ನ ಉಡುಪಿ ಮೈತ್ರಿ ಕಾಂಪ್ಲೇಕ್ಸ್ ಬ್ರಾಂಚ್ ನ ಎಸ್.ಬಿ.ಐ, ಬ್ಯಾಂಕ್ ಖಾತೆ ಬಳಕೆ ಮಾಡಿದ್ದು, ಅದರಿಂದ ಹಣವನ್ನು ಪಣವಾಗಿಟ್ಟ ಇತರರಿಗೆ ಬರಬೇಕಾದ ಲಾಭಾಂಶದ ಹಣ ಪಡೆಯಲು ಆತನ ಪತ್ನಿ ವಾಣಿಶ್ರೀ ರವರ ಉಡುಪಿ ಮೈತ್ರಿ ಕಾಂಪ್ಲೇಕ್ಸ್ ಬ್ರಾಂಚ್ ನ ಎಸ್.ಬಿ.ಐ, ಬ್ಯಾಂಕ್ ಖಾತೆಯನ್ನು ಬಳಕೆ ಮಾಡಿದ್ದಾನೆ ಎನ್ನಲಾಗಿದೆ.
ಅನಂತ ಮತ್ತು ಆತನ ಪತ್ನಿ ವಾಣಿಶ್ರೀ ಇವರ ತಲಾ 1 ಮೊಬೈಲ್ ಪೋನ್ ಒಟ್ಟು 2 ಮೊಬೈಲ್ ಪೋನ್ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 78 KP ACTಮತ್ತು112 BNS ರಂತೆ ಪ್ರಕರಣ ದಾಖಲಾಗಿದೆ.