
ಉಡುಪಿ: ದಿನಾಂಕ:06-06-2025(ಹಾಯ್ ಉಡುಪಿ ನ್ಯೂಸ್) ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದೆಂದು ನಂಬಿಸಿ ಯಾರೋ ಅಪರಿಚಿತರು ಯುವತಿಯೋರ್ವಳಿಗೆ ಐದು ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ದೀಪ್ತಿ (26) ಎಂಬವರನ್ನು ದಿನಾಂಕ 01/06/2025 ರಂದು ಟೆಲಿಗ್ರಾಂ ಆಪ್ ನಲ್ಲಿ ಯಾರೋ ಅಪರಿಚಿತರು K&K GROUP ಎಂಬ ಗ್ರೂಪ್ ಗೆ ಸೇರ್ಪಡೆ ಮಾಡಿ ಕೆಲವೊಂದು ಟಾಸ್ಕ್ ಗಳನ್ನು ನೀಡಿ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದಾಗಿ ದೀಪ್ತಿ ರವರನ್ನು ನಂಬಿಸಿದ್ದು, ಅದರಂತೆ ದೀಪ್ತಿ ರವರು ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ದಿನಾಂಕ 01/06/2025 ರಿಂದ ದಿನಾಂಕ 04/06/2025 ರ ವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 4,92,477/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಅದರೆ ಅಪರಿಚಿತ ವ್ಯಕ್ತಿಗಳು ಈ ತನಕ ದೀಪ್ತಿ ರವರು ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ನೀಡದೇ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66(ಸಿ),66(ಡಿ)ಐ.ಟಿ. ಆಕ್ಟ್ ಮತ್ತು 318(4) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.