Spread the love

ಮಣಿಪಾಲ: ದಿನಾಂಕ 06/06/2025 (ಹಾಯ್ ಉಡುಪಿ ನ್ಯೂಸ್) ದಶರಥ ನಗರದ ಡಿ.ಕ್ಲಾಸಿಕೋ ಲಾಡ್ಜ್ ನಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆಯ ಕೊಠಡಿಗೆ ದಾಳಿ ನಡೆಸಿದ ಮಲ್ಪೆ ವ್ರತ್ತ ನಿರೀಕ್ಷಕರಾದ ರಾಮಚಂದ್ರ ನಾಯಕ್‌ ಅವರು ಮಹಿಳೆಯನ್ನು ರಕ್ಷಿಸಿ ಓರ್ವ ಪಿಂಪ್ ನನ್ನು ಬಂಧಿಸಿದ್ದಾರೆ.

ವೃತ್ತ ನಿರೀಕ್ಷಕರು, ಮಲ್ಪೆ ವೃತ್ತ, ಪ್ರಭಾರ ಪಿಐ ಮಣಿಪಾಲ ಪೊಲೀಸ್‌ ಠಾಣೆ ರಾಮಚಂದ್ರ ನಾಯಕ್ ಅವರಿಗೆ ದಿನಾಂಕ :05-06-2025 ರಂದು ಬಡಗುಬೆಟ್ಟು ಗ್ರಾಮದ ದಶರಥನಗರದ ಡಿ.ಕ್ಲಾಸಿಕೋ ಲಾಡ್ಜ್‌ ನ ಒಂದನೆ ಮಹಡಿಯಲ್ಲಿನ ರೂಮ್‌ ನಂಬ್ರ 104 ರಲ್ಲಿ ಅಕ್ರಮ ಲಾಭಕ್ಕಾಗಿ ಬಲವಂತವಾಗಿ ಮಹಿಳೆಯರನ್ನು ಇರಿಸಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ದಾಳಿ ಮಾಡಿ ನೊಂದ ಮಹಿಳೆಯನ್ನು ರಕ್ಷಿಸಿದ್ದಾರೆ .

ಆರೋಪಿತ ಚುಮಾನ್‌ರಾಮ್‌ ಎಂಬವನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 3,4,5,6 ITP Act ರಂತೆ ಪ್ರಕರಣ ದಾಖಲಾಗಿದೆ.

error: No Copying!